ಮೈಸೂರು

ಜೂ.10ಕ್ಕೆ ಮಂಗಳಮುಖಿ ಎ.ರೇವತಿ ರಚನೆಯ ‘ನನ್ನ ದನಿ’ ನಾಟಕ ಪ್ರದರ್ಶನ

ಮೈಸೂರು,ಜೂ.7 : ಮಂಗಳಮುಖಿ ಎ.ರೇವತಿ ರಚನೆಯ ‘ನನ್ನ ದನಿ’ ನಾಟಕ ಪ್ರದರ್ಶನವನ್ನು ಕದಂಬ ರಂಗವೇದಿಕೆ ವತಿಯಿಂದ ಜೂ. 10ರ ಸಂಜೆ 6.39ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿದೆ ಎಂದು ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡಿನ ಮಂಗಳಮುಖಿಯಾದ ಎ.ರೇವತಿಯವರ ಜೀವನಾಧಾರಿತವಾಗಿ ರಚಿಸಿರುವ ‘ಎನ್ನ ಕೊರಳ್ ತಮಿಳ್’ ನಾಟಕವನ್ನು ಅವರೇ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ ಎಳೆ ಎಳೆಯಾಗಿ ಬಿಡಿಸಿದ್ದು  ಸ್ವತಃ ಅವರೇ ಅಭಿನಯಿಸಿದ್ದಾರೆ, ರಾಜ್ಯದಲ್ಲಿ ಇದು ಮೂರನೇ ಪ್ರದರ್ಶನವಾಗಿದೆ ಎಂದು ಹೇಳಿದರು.

ಶ್ಯಾಂ ಅವರಿಂದ ಸಂಗೀತ, ಕಲ್ಕಿ ಸುಬ್ರಮಣ್ಯ ಅವರ ಗೀತ ರಚನೆ, ಎ.ಮಂಗೈ ಅವರು ನಿರ್ದೇಶಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಪ್ರದರ್ಶನಕ್ಕೆ ಸಾಹಿತಿ ಡಾ.ಕಾಳೇಗೌಡ ನಾಗವಾರ ಚಾಲನೆ ನೀಡಲಿದ್ದು, ಪ್ರವೇಶ ಉಚಿತ ಎಂದು ತಿಳಿಸಿದರು.

ಬಿ.ತಿಪ್ಪಣ್ಣ, ವಿ.ಎಸ್.ರಾಮಣ್ಣ, ಸುಬ್ರನರಸಿಂಹ, ಅಶ್ವಥ ಕದಂಬ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: