ಮನರಂಜನೆಮೈಸೂರು

ಜೂ.15ರಂದು ‘ಅಮ್ಮ ಐ ಲವ್ ಯೂ’ ರಾಜ್ಯಾದ್ಯಂತ ಬಿಡುಗಡೆ

'ಕಾಲಾ' ಚಿತ್ರದ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡವನಲ್ಲ : ಚಿರಂಜೀವಿ ಸರ್ಜಾ

ಮೈಸೂರು,ಜೂ.7 : ದ್ವಾರಕೀಶ್ ನಿರ್ಮಾಣದ, ಸಾಂಸಾರಿಕ ಭಾವಾನಾತ್ಮಕ ವಿಭಿನ್ನ ಕಥಾಹಂದರ ಹೊಂದಿರುವ ಚಿರಂಜೀವಿ ಸರ್ಜಾ ಹಾಗೂ ನಿಶ್ವಿಕಾ ಅಭಿನಯದ ‘ಅಮ್ಮ ಐ ಲವ್ ಯೂ’ ಚಲನಚಿತ್ರವು ಜೂ.15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು ‘ಅಮ್ಮ ಐ ಲವ್ ಯೂ’ ಚಿತ್ರದಲ್ಲಿ ಹಿರಿಯ ಕಲಾವಿದೆ ನಟಿ ಸಿತಾರಾ ಅವರು ಮುಖ್ಯ ಪೋಷಕ ಪಾತ್ರ ನಿರ್ವಹಿಸಿದ್ದು, ಪ್ರಕಾಶ್ ಬೆಳವಾಡಿ, ಚಿಕ್ಕಣ್ಣ, ಬಿರಾದಾರ್, ರವಿಕಾಳೆ, ಅವಿನಾಶ್ ಇತರರು ತಾರಾಂಗಣದಲ್ಲಿ ಇದ್ದಾರೆ ಎಂದು ಸಿನಿಮಾ ಪ್ರಚಾರದ ಹಿನ್ನಲೆಯಲ್ಲಿ ಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋಟ್ಯಾಧಿಪತಿ ಮಗ ತನ್ನ ತಾಯಿಗಾಗಿ ಮಾಡುವ ತ್ಯಾಗವನ್ನಾಧಾರಿಸಿದ ಕಥೆಯಾಗಿದ್ದು ಮಂಗಳೂರು, ಉಡುಪಿ, ಮಣಿಪಾಲ್ ನಲ್ಲಿ ಚಿತ್ರೀಕರಣವಾಗಿದ್ದು, 2 ವಾರಗಳ ನಂತರ ವಿದೇಶಗಳಲ್ಲಿ ಚಿತ್ರ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಚಿತ್ರದ ನಾಯಕ ನಟ ಚಿರಂಜೀವಿ ಸರ್ಜಾ ಮಾತನಾಡಿ, ಸ್ಟಾರ್ ವಾರ್ ನನಗೆ ಗೊತ್ತಿಲ್ಲ, ಈ ಬಗ್ಗೆ ಸ್ಟಾರ್ ಗಳನ್ನೇ ಕೇಳಿ ಎಂದು ಸುದ್ದಿಗಾರರ ಪ್ರಶ್ನೆಗೆ ನಯವಾಗಿ ಜಾರಿಕೊಂಡ ಅವರು ‘ಅಮ್ಮ ಐ ಲವ್ ಯೂ’ ಪ್ರತಿಯೊಬ್ಬರು ನೋಡುವಂತಹ ಅತ್ಯುತ್ತಮ ಪೈಸಾ ವಸೂಲ್ ಚಿತ್ರವಾಗಿದೆ ೆಎಂದರು

ಹಿರಿಯ ನಟ ರಜನೀಕಾಂತ್ ‘ಕಾಲಾ’ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿ, ನಾನು ಅಷ್ಟು ದೊಡ್ಡವನಲ್ಲ. ಕನ್ನಡ ಚಿತ್ರರಂಗ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವೆ ಎಂದು ಸ್ಪಷ್ಪಡಿಸಿದರು.

ಪೌರಾಣಿಕಾ ಸಿನಿಮಾದಲ್ಲಿ ಅಭಿನಯಿಸುವ ಇಂಗಿತವನ್ನು ವ್ಯಕ್ತಪಡಿಸಿ, ಅದಕ್ಕಾಗಿ ತಯಾರಿ ಬೇಕಿದ್ದು ಅವಕಾಶ ಬಂದರೆ ಖಂಡಿತ ಕೈ ಬಿಡುವುದಿಲ್ಲ ಎಂದು ತಿಳಿಸಿದರು.

ವಿ.ನಾಗೇಂದ್ರ ಕವಿರಾಜ್ ಹಾಗೂ ಇತರರು ಹಾಡಿನ ರಚನೆಗೆ ಗುರುಕಿರಣ್ ಸಂಗೀತ ನೀಡಿದ್ದಾರೆ  ಐ ಲವ್ ಯೂ ಅಪ್ಪಾ ಹಾಡಿನಂತೆ ಈ ಸಿನಿಮಾದಲ್ಲಿ ಐ ಲವ್ ಯೂ ಅಮ್ಮ ಹಾಡು ಅತ್ಯಂತ ಜನಪ್ರಿಯವಾಗಲಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ನಾಯಕಿ ನಟಿ ನಿಶ್ವಿಕಾ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: