ಮೈಸೂರು

ಜಠರ ಕರುಳಿನ ರಕ್ತಸ್ರಾವದಿಂದ ‘ರಕ್ತ ವಾಂತಿ’ ಸುಲಭದಲ್ಲಿ ಇದೆ ಶಸ್ತ್ರ ಚಿಕಿತ್ಸೆ

ಈ ಬಗ್ಗೆ ಏನು ಹೇಳಿದರು ಎನ್.ಹೆಚ್. ಆಸ್ಪತ್ರೆಯ ವೈದ್ಯರು ?

ಮೈಸೂರು, ಜೂ.7 :  ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಇದೇ ಪ್ರಪ್ರಥಮವಾಗಿ ವಿನೂತನ ಜಠರಕರುಳಿನ ರಕ್ತಸ್ರಾವ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಗ್ಯಾಸ್ಟ್ರೋ ಎಂಟೆರೋಲಜಿಸ್ಟ್ ಡಾ.ಎ.ಕೆ.ಸತೀಶ್ ರಾವ್ ತಿಳಿಸಿದರು.

ಪಿತ್ತ ಜನಕಾಂಗದ ಸಮಸ್ಯೆಯಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಉಬ್ಬಿಕೊಂಡ ರಕ್ತನಾಳಗಳು ಹೊಟ್ಟೆಯಲ್ಲಿಯೇ ಒಡೆದು ಹೋಗುವುದು ಇದರಿಂದ ರಕ್ತವಾಂತಿಯಾಗಲಿದ್ದು ಈ ಬಗ್ಗೆ ಅಧೈರ್ಯಗೆಡದೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಯನ್ನು ಎದುರಿಸಬಹುದಾಗಿದೆ ಎಂದರು.

ಹೃದಯ ಕವಾಟಗಳಿಗೆ ಅಳವಡಿಸುವ ಸ್ಟಂಟ್ ನಂತೆಯೇ ಸಣ್ಣ ಕರುಗಳಿಗೆ ಸುಮಾರು 16 ಇಂಚು ಉದ್ದ ಉಪಕರಣವನ್ನು ಅಳವಡಿಸುವ ಮೂಲಕ ರಕ್ತಸ್ರಾವವನ್ನು ಯಶಸ್ವಿಯಾಗಿ ತಡೆಗಟ್ಟಬಹುದಾಗಿದ್ದು ಇದರಿಂದ ರೋಗಿಗೆ ಯಾವುದೇ ದುಷ್ಪರಿಣಾಮವಾಗದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಸ್ತು, ಮಲದಲ್ಲಿ ರಕ್ತ ಹಾಗೂ ರಕ್ತ ವಾಂತಿಯು ರೋಗದ ಸಾಮಾನ್ಯ ಲಕ್ಷಣವಾಗಿದ್ದು ಮಧುಮೇಹಿಗಳಿಗೆ ಹಾಗೂ ಮಧ್ಯಪಾನ ವ್ಯಸನಿಗಳಲ್ಲಿ ಲಿವರ್ ತೊಂದರೆಯಿದ್ದವರಿಗೆ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಈ ಬಗ್ಗೆ ಗಾಬರಿಗೊಳ್ಳದೆ ಸೂಕ್ತ ಚಿಕಿತ್ಸೆ ಪಡೆಯಬಹುದಿದ್ದು, ಚಿಕಿತ್ಸಾ ವೆಚ್ಚವು ಕೈಗೆಟಕುವ ದರದಲ್ಲಿ ಇದೆ ಎಂದು ತಿಳಿಸಿದರು.

ಕಳೆದೊಂದು ವರ್ಷದಿಂದ  40 ರಿಂದ 60ರವರೆಗಿನ ವಯೋಮಾನದ ಸುಮಾರು 10 ರೋಗಿಗಳಿಗೆ ಈ ಶಸ್ತ್ರ ಚಿಕಿತ್ಸೆ ಮಾಡಿ ಉಪಕರಣ ಅಳವಡಿಸಿದ್ದು ಇದರಿಂದ ರೋಗಿ ಸಂಪೂರ್ಣ ಚೇತರಿಸಿಕೊಂಡು ಸಾಮಾನ್ಯ ಜೀವನ ನಡೆಸುತ್ತಿದ್ದಾರೆ ಎಂದರು ತಿಳಿಸಿದರು.

ಕೊಳ್ಳೇಗಾಲದ 54 ವರ್ಷದ ಶುಭಾಷಿಣಿ, ವಕೀಲ ಸಿದ್ದೇಗೌಡ, ನಾರಾಯಣ ರಾವ್ ತಮಗಾದ ತೊಂದರೆ ಹಾಗೂ ಚಿಕಿತ್ಸೆಯಾದ ನಂತರ ತಮ್ಮ ಆರೋಗ್ಯದಲ್ಲಿ ಆದ ಸುಧಾರಣೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು.

ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ವಿ.ಕಾಮತ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: