ಮೈಸೂರು

ಜೂ.10ರಂದು ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಅಡಿಷನ್

ಮೈಸೂರು,ಜೂ.7 : ನಗರದ ಅಪ್ರವರಂಬೆ ವತಿಯಿಂದ ಆರಂಭಿಸುತ್ತಿರುವ ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಅಡಿಷನ್ ನಡೆಸಲಾಗುವುದು ಎಂದು ಕಾರ್ಯದರ್ಶಿ ನಾ.ನಾಗಚಂದ್ರ ಹೇಳಿದರು.

ಕಳೆದ ಹತ್ತು ವರ್ಷಗಳಿಂದ ರಂಗತರಬೇತಿ, ನಾಟಕೋತ್ಸವ, ವಿಚಾರಸಂಕಿರಣ, ಮಕ್ಕಳ ನಾಟಕೋತ್ಸವ, ರಂಗಕರ್ಮಿಗಳ ಸನ್ಮಾನ ಸೇರಿದಂತೆ ರಂಗಭೂಮಿಗೆ ತನ್ನದೇ ಸೇವೆ ಸಲ್ಲಿಸುತ್ತಿರುವ ಅಪ್ರವರಂಭವು ಈಗ ರವಿರಂಗ ವಾರಾಂತ್ಯ ರಂಗಶಾಲೆ ಶಿಬಿರವನ್ನು ಆರಂಭಿಸುತ್ತಿದ್ದು. ರಾಮಕೃಷ್ಣ ನಗರದ  ಇ ಮತ್ತು ಎಫ್ ಬ್ಲಾಕ್ ನಲ್ಲಿರುವ ನೃಪತುಂಗ ಕನ್ನಡ ಶಾಲೆಯಲ್ಲಿ ಅಡಿಷನ್ ನಡೆಯುವುದು ಎಂದು ತಿಳಿಸಿದರು.

ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ 10 ವರ್ಷದಿಂದ 15ರೊಳಗಿನ ವಯೋಮಿತಿಯ ಮಕ್ಕಳು ಅಂದು ಬೆಳಗ್ಗೆ 10.30 .1.30 ವರೆಗೆ ಅಡಿಷನ್ ಪಾಲ್ಗೊಳ್ಳಬಹುದು.

ಜೂ.17 ರಿಂದ 2019ರ ಜನವರಿವರೆಗೂ ಪ್ರತಿ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ನುರಿತ ರಂಗತಜ್ಞರಿಂದ ಭಾಷಾ ಕಲಿಕೆ, ಸ್ಪಷ್ಟ ಉಚ್ಛಾರಣೆ, ಹಾಡು ನೃತ್ಯ, ಚಿತ್ರಕಲೆ, ಕಥೆ ಹೇಳುವುದು ಮುಖವಾಡ ತಯಾರಿಕೆ ತರಬೇತಿ ನೀಡಲಾಗುವುದು. ಸುಮಾರು 20 ರಿಂದ 25 ಮಕ್ಕಳಿಗೆ ಮಾತ್ರ ಅವಕಾಶವಿರುವುದು ಎಂದರು ಮಾಹಿತಿಗಾಗಿ ಮೊ.ನಂ. 9743621655, 9632841700 ಅನ್ನು ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಪಾಲಿಕೆ ಸದಸ್ಯ, ಸಂಸ್ಥೆ ಉಪಾಧ್ಯಕ್ಷ ಮಾ.ವಿ.ರಾಮಪ್ರಸಾದ್, ಖಜಾಂಚಿ ಜಗದೀಶ್ ಇದ್ದರು.  (ವರದಿ : ಕೆ.ಎಂ.ಆರ್)

Leave a Reply

comments

Related Articles

error: