ಮೈಸೂರು

ಪತಿಯ ಅಕ್ರಮ ಸಂಬಂಧ ಬಯಲು ಮಾಡಿದ ಪತ್ನಿ

ಪತಿಯ ಅಕ್ರಮ ಸಂಬಂಧವನ್ನು ಪತ್ನಿಯೇ ಬಯಲು ಮಾಡಿ ಪೊಲೀಸರಿಗೆ ಅಪರಾಧಿಗಳನ್ನು ಹಿಡಿದುಕೊಟ್ಟ ಘಟನೆ ಗುರುವಾರ ತಡರಾತ್ರಿ ಮೈಸೂರು ಜಯನಗರದಲ್ಲಿ ನಡೆದಿದೆ.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರನಗರ ನಿವಾಸಿ ಹೇಮಂತ್ ವಾರಗಳಿಂದ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಆತನ ಪತ್ನಿ ಸೌಮ್ಯ , ಪತಿಯ ಬಗ್ಗೆ ಅನುಮಾನಗೊಂಡು ಆತನನ್ನು ಹಿಂಬಾಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಕಳೆದ 19ವರ್ಷಗಳ ಹಿಂದೆಯೇ ಹೇಮಂತ್ ಹಾಗೂ ಸೌಮ್ಯ ಅವರ ವಿವಾಹ ನಡೆದಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಆತ ಮನೆಗೆ ಬಾರದೇ ಪತ್ನಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದು, ಮತ್ತೋರ್ವ ಹೆಂಗಸಿನ ಜೊತೆ ಸಂಬಂಧವಿರಿಸಿಕೊಂಡಿದ್ದ ಎನ್ನಲಾಗಿದೆ. ಅನುಮಾನಗೊಂಡ ಸೌಮ್ಯ ಗಂಡನನ್ನು ಹಿಂಬಾಲಿಸಿ ಹೋಗಿ ಆತ ಜಯನಗರದಲ್ಲಿ ಮನೆ ಮಾಡಿಕೊಂಡಿರುವುದನ್ನು ಕಂಡು ಹಿಡಿದಿದ್ದರು. ಗುರುವಾರ ಜಯನಗರದ ಮನೆಯಲ್ಲಿ ಪತಿ ಇರುವ ವೇಳೆ ತೆರಳಿದ ಸೌಮ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಅಶೋಕಪುರಂ ಪೊಲೀಸರು ಸೌಮ್ಯ ಪತಿ ಹೇಮಂತ್ ಹಾಗೂ ಆತನ ಜೊತೆ ಇರುವ ಮಹಿಳೆಯನ್ನು ಬಂಧಿಸಿದ್ದಾರೆ.  ಅಶೋಕಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

comments

Related Articles

error: