ಪ್ರಮುಖ ಸುದ್ದಿ

ಪತ್ರಕರ್ತೆ ಗೌರಿ ಹತ್ಯೆಯ ಕೇಸ್ ಶಂಕಿತ ಆರೋಪಿಗಳಿಗೂ ಎಂಎಂ ಕಲ್ಬುರ್ಗಿ ಹತ್ಯೆಗೂ ಲಿಂಕ್

ರಾಜ್ಯ(ಬೆಂಗಳೂರು)ಜೂ.7:- ಸಾಹಿತಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತಿರುವು ದೊರಕಿದ್ದು, ಪತ್ರಕರ್ತೆ  ಗೌರಿ ಲಂಕೇಶ್ ಹತ್ಯೆ ಕೇಸ್ ನಲ್ಲಿ ಬಂಧಿತನಾಗಿರುವ ಶಂಕಿತ ಆರೋಪಿಗಳಿಗೂ ಎಂಎಂ ಕಲ್ಬುರ್ಗಿ ಹತ್ಯೆಗೂ ಲಿಂಕ್​  ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಪತ್ರಕರ್ತೆ ಗೌರಿ ಹತ್ಯೆಯ ಕೇಸ್ ನಲ್ಲಿ ಆರೋಪಿಯಾಗಿರುವ ಅಮೋಲ್​ ಕಾಳೆಯನ್ನು  ಕಲ್ಬುರ್ಗಿ ಕುಟುಂಬಸ್ಥರು ಗುರುತಿಸಿದ್ದಾರೆ. ಪ್ರೊ. ಕಲ್ಬುರ್ಗಿ ಮನೆಗೆ ಬಂದು ಬಾಗಿಲು ಬಡಿದಿದ್ದು ಇದೇ ಅಮೋಲ್​​ ಕಾಳೆ. ಬಂದಿದ್ದ ಇಬ್ಬರಲ್ಲಿ ಅಮೋಲ್​ ಕಾಳೆ ಒಬ್ಬ ಎಂದು ಖಚಿತವಾಗಿದೆ. ನವೀನ್​ ಅರೆಸ್ಟ್ ಮಾಡುವ​ ಮುನ್ನ ಎಸ್ ಐಟಿ ಅಧಿಕಾರಿಗಳು ಅಮೋಲ್​ ಕಾಳೆ ಫಾಲೋ ಮಾಡಿ ಪೋಟೋ ತೆಗೆದಿದ್ದರು. ಆ ಪೋಟೋವನ್ನು ಎಸ್ ಐಟಿ  ಕಲ್ಬುರ್ಗಿ ಕುಂಟುಂಬಸ್ಥರಿಗೆ ನೀಡಿದಾಗ ಈತ ಇರಬಹುದು ಎಂದು ಹೇಳಿದ್ದರು. ಇದೀಗ ಅಮೋಲ್​ ಕಾಳೆ ಅರೆಸ್ಟ್​ ಆದ ಮೇಲೆ ಮತ್ತೆ ಕಲ್ಬುರ್ಗಿ ಅವರ ಕುಟುಂಬಕ್ಕೆ ಎಸ್ ಐಟಿ  ಕ್ಲೀಯರ್​ ಪೋಟೋ ಕಳುಹಿಸಿದ್ದಾರೆ. ಹತ್ಯೆಯ ದಿನ ಬಂದು ಮರಾಠಿಯಲ್ಲಿ ಮಾತನಾಡಿದ ವ್ಯಕ್ತಿ ಇವನೇ ಎಂಬುದು ಸ್ಪಷ್ಟವಾಗಿದ್ದು ಅಮೋಲ್ ಕಾಳೆಯನ್ನು ಎಸ್ ಐ ಟಿ ವಶಕ್ಕೆ ಪಡೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: