ಮೈಸೂರು

ಹೊಸ ಮದ್ಯಮಳಿಗೆಗಳಿಗೆ ಪರವಾನಗಿ ನೀಡದಿರಿ : ಜನಜಾಗೃತಿ ವೇದಿಕೆ ಹಕ್ಕೊತ್ತಾಯ

protest-2ಕರ್ನಾಟಕದಲ್ಲಿ ಪಾನ ನಿಷೇಧ ಜಾರಿಯಾಗಬೇಕು ಮತ್ತು 900 ಮದ್ಯಮಳಿಗೆಗಳಿಗೆ ಸರ್ಕಾರ ಹೊಸ ಪರವಾನಗಿ ನೀಡಬಾರದು ಎಂದು ಹಕ್ಕೊತ್ತಾಯ ಮಂಡಿಸಿ ಅಖಿಲ ಕರ್ನಾಟಕ ಮೈಸೂರು ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಶುಕ್ರವಾರ ಜಾಥಾ ನಡೆಯಿತು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥಾದಲ್ಲಿ ಅಮಲಿನಿಂದ ಮುಕ್ತಿ, ಧರ್ಮಕ್ಕಿದೆ ಅದರ ಶಕ್ತಿ, ಮದ್ಯಪಾನ ಬಿಡಿಸಿರಿ ಜೀವನವನ್ನು ಉಳಿಸಿರಿ, ದೇಶದ ಉದ್ಧಾರ ಪಾನ ನಿಷೇಧದಲ್ಲಿ ಅಡಗಿದೆ ಎನ್ನುವ ಫಲಕಗಳು ಕಂಡು ಬಂತು. ಈ ಸಂದರ್ಭ ಜಾಥಾದಲ್ಲಿ ಪಾಲ್ಗೊಂಡವರು ಮಾತನಾಡಿ ಸಮಾಜದ ಒಳಿತಿಗಾಗಿ ಮದ್ಯದಂಗಡಿಗಳನ್ನು ವಿಸ್ತರಿಸುವ ನಿರ್ಧಾರವನ್ನು ಶಾಶ್ವತವಾಗಿ ಕೈಬಿಡಬೇಕು. ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೊಳಿಸಬೇಕು. ಅಕ್ರಮ ಸಾರಾಯಿದಂಧೆ, ಕಳ್ಳಭಟ್ಟಿ ನಿರತರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಒಟ್ಟು 10,051 ಮದ್ಯದಂಗಡಿಗಳಿವೆ ಇದು ಸಾಲದೆಂಬಂತೆ ರಾಜ್ಯ ಸರ್ಕಾರ ಜನಸಂಖ್ಯೆಯ ಆಧಾರದಲ್ಲಿ 1,750 ಹೊಸ ಮದ್ಯದಂಗಡಿಗಳನ್ನು ತೆರೆಯುವ ಅಗತ್ಯವಿದೆ ಎಂದು ತೀರ್ಮಾನಿಸಿ ಈ ನಿಟ್ಟಿನಲ್ಲಿ ಪ್ರಸ್ತುತ 900ಮದ್ಯ ಮಳಿಗೆಗಳನ್ನು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲು ಅಬಕಾರಿ ಆಯುಕ್ತರ ಮೂಲಕ ಆದೇಶ ಹೊರಡಿಸಿದೆ. ಹೊಸದಾಗಿ ಮದ್ಯ ಮಾರಾಟ ಮಳಿಗೆಗಳನ್ನು ಆರಂಭಿಸಲು ಎಮ್.ಎಸ್.ಐ.ಎಲ್ ಸಂಸ್ಥೆಯು ಅಬಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಸರಕಾರ ಇದನ್ನು ಒಪ್ಪಿ ಅನುಮೋದನೆ ನೀಡಿದೆ. ರಾಜ್ಯದ 30 ಜಿಲ್ಲೆಗಳ 206 ತಾಲೂಕುಗಳಲ್ಲಿ 29,406ಹಳ್ಳಿಗಳಿವೆ. ಸರಾಸರಿಯಾಗಿ ಜಿಲ್ಲೆಗೆ 335 ರಂತೆ ತಾಲೂಕಿಗೆ 48ರಂತೆ ಮದ್ಯದಂಗಡಿಗಳಿವೆ. ರಾಜ್ಯದ 6.75ಕೋಟಿ ಜನಸಂಖ್ಯೆಯಲ್ಲಿ  1.75 ಕೋಟಿ ಜನ ನಿತ್ಯ ಮದ್ಯಪಾನ ಮಾಡುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ದುಡಿಯುವ ವರ್ಗದ ಜನರು ನಿತ್ಯವೂ ಮದ್ಯಪಾನ ಮಾಡುತ್ತಿದ್ದಾರೆ. ಇದರಿಂದ ಕುಟುಂಬ ನಾಶವಾಗಲಿದೆ. ಆದ್ದರಿಂದ ಹೊಸ ಮದ್ಯದಂಗಡಿಗಳನ್ನು ನೀಡುವ ಸರ್ಕಾರದ ನಿಲುವು ಬದಲಾಗಬೇಕು ಎಂದರು.

ಜಾಥಾದಲ್ಲಿ ವೇದಿಕೆಯ ಕಾರ್ಯದರ್ಶಿ ಮಹಾಬಲ ಕುಲಾಲ್, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ, ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

comments

Related Articles

error: