ಮೈಸೂರು

ಜೂ.9ರಂದು ಎಂಡಿಎಎ ವತಿಯಿಂದ ನಂದಿ ಪ್ರಶಸ್ತಿ ಪ್ರಧಾನ ಸಮಾರಂಭ

ಮೈಸೂರು,ಜೂ.7 :  ಮೈಸೂರು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಕೊಡಮಾಡಲ್ಪಡುವ ನಂದಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜೂ.9ರ ಸಂಜೆ 4ಕ್ಕೆ ಮಹಾರಾಜ ಕಾಲೇಜು ವಿವಿಯ ಸಭಾಂಗಣದಲ್ಲಿ ಆಯೋಜಿಸಿದೆ.

ಮಾಜಿ ಶಾಸಕ ವಾಸು ಅಧ್ಯಕ್ಷತೆ ವಹಿಸುವರು, ಎಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರ ಉದಯ್ ಕೆ. ಪ್ರಭು ಅವರ ಸನ್ಮಾನವನ್ನು ಆಯೋಜಿಸಿದೆ.

ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷ ಹೆಚ್.ಟಿ.ಮಹದೇವ, ಕಾರ್ಯದರ್ಶಿ ಎ.ರಾಜವೇಲು, ಅಂತರಾಷ್ಟ್ರೀಯ ಅಥ್ಲೆಟ್ ಎಸ್.ಸೋಮಶೇಖರ್, ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಡಾ.ಪಿ.ಕೃಷ್ಣಯ್ಯ, ಎಂಡಿಎಎ ಉಪಾಧ್ಯಕ್ಷ ಅಭಿಲಾಶ್ ನಾಯರ್, ಮಹೇಶ್ ಬಳ್ಳಾಳ್, ಕಾರ್ಯದರ್ಶಿ ಬಿ.ಶ್ರೀಕಾಂತ್ ಇರುವರು.

ಟಿ.ನರಸೀಪುರದ ಕ್ರೀಡಾ ಪ್ರಚಾರಕ ಕೆ.ಮಂಜುನಾಥ್, ಕ್ರೀಡಾ ವರದಿಗಾರ್ತಿ ಕೆ.ನಾಗರತ್ನ ಬಾಯಿ, ಛಾಯಾಗ್ರಾಹಕ ಕೆ.ಹೆಚ್.ಚಂದ್ರು ಇವರುಗಳೊಂದಿಗೆ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನಂದಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: