ಮೈಸೂರು

ವಿಜ್ಞಾನಿಗಳ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಮೈಸೂರಿನ ವಿದ್ಯಾರ್ಥಿ ಆಯ್ಕೆ

ಕಿರಿಯ ವಿಜ್ಞಾನಿಗಳ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಮೈಸೂರಿನ ವಿದ್ಯಾರ್ಥಿ ಪವನ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ,ಕ.ರಾ.ವಿ.ಪ.ದಕ್ಷಿಣ ಕನ್ನಡಜಿಲ್ಲಾ ಸಮಿತಿ  ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಇವುಗಳ ಸಂಯುಕ್ತಾಶ್ರಯದಲ್ಲಿ ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ – ತಂತ್ರಜ್ಞಾನ ಮತ್ತು ಅನ್ವಯಗಳ ಬಳಕೆ ‘ ಎಂಬ ಕೇಂದ್ರ ವಿಷಯದಡಿ  ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ ಜರುಗಿತು.

ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ 3 ದಿನಗಳ ಕಾಲ ಏರ್ಪಡಿಸಿದ್ದ 24ನೇ ಅಖಿಲ ಕರ್ನಾಟಕ ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ-2016ದಲ್ಲಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ ಕೆಲವು ಶಾಲೆಗಳ 30 ಮಂದಿ ಕಿರಿಯ ವಿಜ್ಞಾನಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರದ ಬಾರಾಮತಿ ನಗರದಲ್ಲಿ ಡಿಸೆಂಬರ್ 27 ರಿಂದ  5 ದಿನಗಳ ಕಾಲ ನಡೆಯುವ 24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಅಧಿವೇಶನದಲ್ಲಿ ಈ 30 ಮಂದಿ ಕಿರಿಯ ವಿಜ್ಞಾನಿಗಳು ಕರ್ನಾಟಕ ರಾಜ್ಯವನ್ನು  ಪ್ರತಿನಿಧಿಸಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಲಿದ್ದಾರೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ತಿಳಿಸಿದರು.

ಈ ಸಮಾವೇಶದಲ್ಲಿ“ನಮಗೆ ಅವಶ್ಯವಾದ ಕಳೆ ‘ ಎಂಬ ವಿಷಯದ ಕುರಿತು ಅತ್ಯುತ್ತಮವಾಗಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ ಮೈಸೂರು ನಗರದ ವಿದ್ಯಾವರ್ಧಕಎಸ್.ಬಿ.ಎಂ. ಶಾಲೆಯ ಎಸ್.ವಿ.ಪವನ್  ಎಂಬ ವಿದ್ಯಾರ್ಥಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಕೊಡಲ್ಪಡುವ ಯುವ ವಿಜ್ಞಾನಿ 2016  ಪ್ರಶಸ್ತಿಗೆ ಪಾತ್ರರಾದರು. ಈ ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕಿ ಅನುಪಮ ಪದಕಿ ಅವರಿಗೆಉತ್ತಮ ಮಾರ್ಗದರ್ಶಿ ಪ್ರಶಸ್ತಿ ಲಭಿಸಿತು.

ಡಾ.ಸ.ಜ.ನಾಗಲೋಟಿಮಠ ದತ್ತಿ ಪ್ರಶಸ್ತಿಗೆ ಮೈಸೂರು ನಗರದ ವಿದ್ಯಾವರ್ಧಕಎಸ್.ಬಿ.ಎಂ. ಶಾಲೆಯಎಸ್.ವಿ.ಪವನ್, ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸ್ವಸ್ತಿಕ್ ಪದ್ಮ, ದ.ಕ.ಜಿಲ್ಲೆಯ ಉಜಿರೆಯ ಎಸ್.ಡಿಎ.ಎಂ.ಆಂಗ್ಲಮಾಧ್ಯಮ ಶಾಲೆಯ ಸ್ನೇಹಾ ಮರಿಯಾ, ದಾವಣಗೆರೆ ಜಿಲ್ಲೆಯ ಕುಕ್ಕರಗೊಲ್ಲ ಪಟೇಲ್ ವೀರಪ್ಪ ಶಾಲೆಯ ಆರ್.ಶ್ರೇಯ ಭಾಜನರಾಗಿದ್ದಾರೆ.

ಮೈಸೂರಿನ ಸದ್ವಿದ್ಯಾಶಾಲೆ ವಿದ್ಯಾರ್ಥಿನಿ ಮಾನ್ಯ.ಎಸ್‍.ರಾವ್‍ ಆಹಾರ ಸದ್ಭಳಕೆ ಕುರಿತು ಮಂಡಿಸಿದ ಸಂಶೋಧನಾ ಪ್ರಭಂದವು ರಾಷ್ಟ್ರ ಮಟ್ಟಕ್ಕೆಆಯ್ಕೆಯಾಗಿದೆ.

Leave a Reply

comments

Related Articles

error: