ಮನರಂಜನೆ

ಅಭಿಮಾನಿಯ ಕೆಲಸಕ್ಕೆ ಹೆಮ್ಮೆ ಪಟ್ಟ ಕಿಚ್ಚ ಸುದೀಪ್

ಬೆಂಗಳೂರು,ಜೂ.8-ಕಿಚ್ಚ ಸುದೀಪ್ ಅವರ ಮಹಿಳಾ ಫಾನ್ಸ್ ಕ್ಲಬ್ ಆದ `ಹೆಬ್ಬುಲಿ ಹುಡ್ಗೀರು’ ತಂಡ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಒಂದೊಳ್ಳೆ ಕೆಲಸವನ್ನು ಮಾಡಿದ್ದಾರೆ. ಈ ಕೆಲಸವನ್ನು ಮೆಚ್ಚಿಕೊಂಡಿರುವ ಸುದೀಪ್ ತಮ್ಮ ಟ್ವಿಟರ್ ಮೂಲಕ ಆ ಮಹಿಳಾ ಅಭಿಮಾನಿಯ ಕೆಲಸವನ್ನು ಹೊಗಳಿದ್ದಾರೆ.

ಹೆಬ್ಬುಲಿ ಹುಡ್ಗೀರು ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ದೃಷ್ಟಿ ಹೀನರಾದ ರಾಜಶೇಖರ್ ಅವರಿಗೆ ಪರೀಕ್ಷೆ ಬರೆಯಲು ನಮ್ಮ ಸಂಘದ ಪೂಜಾ ನೆರವಾದರು ಎಂದು ಟ್ವಿಟ್ ಮಾಡಿರುವುದನ್ನು ನೋಡಿದ ಸುದೀಪ್ ಅಭಿಮಾನಿಯ ಕೆಲಸಕ್ಕೆ ಹೆಮ್ಮೆ ಪಟ್ಟಿದ್ದಾರೆ.

ಸುದೀಪ್ ಅವರ ಉಳಿದ ಅನೇಕ ಅಭಿಮಾನಿಗಳಿಗೂ ಅವರು ಸ್ಪೂರ್ತಿ ನೀಡಿದ್ದಾರೆ. ಈ ಹಿಂದೆ ಹುಟ್ಟುಹಬ್ಬದ ಸಂದರ್ಭದಲ್ಲಿ ಸುದೀಪ್ ಇತರರಿಗೆ ಸಹಾಯ ಮಾಡಿ ಎಂಬ ಕರೆ ನೀಡಿದ್ದು, ಅದೇ ರೀತಿ ಪೂಜಾ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: