ಮೈಸೂರು

ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಅರಿಯಿರಿ: ಪ್ರೊ. ಡಾ. ಆಶ್ಲೇ ಎಚ್. ಪಿನ್ನಿಂಗ್ಟನ್

ಪ್ರತಿಯೊಬ್ಬ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಯು ಪ್ರಸ್ತುತ ಕಾಲಘಟ್ಟದ ವಿಶ್ವದಲ್ಲಿರುವ ಬ್ಯುಸಿನೆಸ್ ಮತ್ತು ಮ್ಯಾನೇಜ್‍ಮೆಂಟ್ ಸಂಸ್ಥೆಗಳ ಬಗ್ಗೆ ತಿಳಿದಿರಬೇಕಾದ ಅವಶ್ಯಕತೆಯಿದೆ ಎಂದು ದಿ ಬ್ರಿಟಿಷ್ ಯುನಿವರ್ಸಿಟಿ ಇನ್ ದುಬೈನ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಆಶ್ಲೇ ಎಚ್. ಪಿನ್ನಿಂಗ್ಟನ್ ಅವರು ಹೇಳಿದರು.

ಶುಕ್ರವಾರದಂದು ಎಸ್‍ಡಿಎಂಐಎಮ್‍ಡಿ ಸಂಸ್ಥೆಯಲ್ಲಿ ನಡೆದ “ಕಾರ್ಯಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ” ಕುರಿತ ಐದನೆಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ವಾಣಿಜ್ಯ ಕ್ಷೇತ್ರದಲ್ಲಿ ಆಗಿರುವ ವಿಕಸನಗಳನ್ನು ಗಮನಿಸಿದರೆ, ಕಳೆದ 50 ವರ್ಷಗಳ ಹಿಂದೆ ಬ್ಯುಸಿನೆಸ್ ಸ್ಕೂಲ್‍ಗಳ ಸಂಖ್ಯೆ ಬಹಳಷ್ಟು ಕಡಿಮೆಯಿತ್ತು. ಮ್ಯಾನೇಜ್‍ಮೆಂಟ್ ಅಧ್ಯಯನ ನಡೆಸುವುದು ಕೂಡ ಎಲ್ಲರಿಗೂ ಸಾಧ್ಯವಿರಲಿಲ್ಲ. ಉನ್ನತ ಮಟ್ಟದಲ್ಲಿದ್ದವರಿಗೆ ಮಾತ್ರ ಮ್ಯಾನೇಜ್‍ಮೆಂಟ್ ಅಧ್ಯಯನ ನಡೆಸುವುದು ಸಾಧ್ಯವಾಗುತ್ತಿತ್ತು.

50 ವರ್ಷಗಳ ಹಿಂದೆ ಮತ್ತು ಪ್ರಸ್ತುತ ಕಾಲದಲ್ಲಿ ಮ್ಯಾನೇಜ್‍ಮೆಂಟ್ ಅಧ್ಯಯನದ ಪಠ್ಯ ವಿಷಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಾರ್ಯಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಎಂಬ ವಿಷಯವು 1980ರಲ್ಲಿ ಸೇರ್ಪಡೆಯಾಯಿತು. ಅಲ್ಲಿಂದ ಇಲ್ಲಿಯತನಕ ಆ ವಿಷಯವು ಮ್ಯಾನೇಜ್‍ಮೆಂಟ್ ಅಧ್ಯಯನದ ಪ್ರಮುಖ ಅಂಗವಾಗಿದೆ ಎಂದರು.

ಎಸ್‍ಡಿಎಂಐಎಮ್‍ಡಿ ನಿರ್ದೇಶಕರಾದ ಡಾ.ಎನ್.ಆರ್. ಪರಶುರಾಮ್ ಮತ್ತು ದೇಶದ ವಿವಿಧೆಡೆಗಳಿಂದ ಆಗಮಿಸಿದ ಸುಮಾರು 200 ಮಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: