ಪ್ರಮುಖ ಸುದ್ದಿ

ಏನೆಲ್ಲ ನಡೆಯುತ್ತಿದೆಯೋ ಅದೆಲ್ಲ ಬರಿ ಡ್ರಾಮಾ : ಉದ್ದವ್ ಠಾಕ್ರೆ

ದೇಶ(ಮುಂಬೈ)ಜೂ.8:-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆಯನ್ನು ಭೇಟಿ ಮಾಡಿದ್ದಾರೆ. ಭೇಟಿಯ ನಂತರ ಉದ್ದವ್ ಠಾಕ್ರೆ ಮಾತನಾಡಿ ಏನೆಲ್ಲ ನಡೆಯುತ್ತಿದೆಯೋ ಅದೆಲ್ಲ ಬರಿ ಡ್ರಾಮಾ ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಸ್ವತಂತ್ರವಾಗಿಯೇ ಸ್ಪರ್ಧಿಸಲಿದೆ. ಬಿಜೆಪಿ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರ ಹೋರಾಟ ನಡೆಸಲಿದೆ, ಏನೆಲ್ಲ ನಡೆಯುತ್ತಿದೆಯೋ ಅದೆಲ್ಲ ಬರೀ ನಾಟಕ ಎಂದಿದ್ದಾರೆ. ಅಮಿತ್ ಶಾ ಮತ್ತು ಉದ್ದವ್ ಠಾಕ್ರೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಅಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಪ್ರವೇಶ ನಿರಾಕರಿಸಲಾಗಿತ್ತು ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: