
ಮೈಸೂರು
ಕಾಲ ಚಲನಚಿತ್ರ ಪ್ರದರ್ಶನಕ್ಕೆ ವಿರೋಧ : ಪ್ರತಿಭಟನೆ
ಮೈಸೂರು,ಜೂ.8:- ತಮಿಳು ಚಿತ್ರನಟ ರಜನಿಕಾಂತ್ ಅಭಿನಯದ ‘ಕಾಲ’ ತಮಿಳು ಚಲನಚಿತ್ರಕ್ಕೆ ರಾಜ್ಯಾದ್ಯಂತ ಕನ್ನಡಿಗರ ವಿರೋಧವಿದ್ದರೂ ಮೈಸೂರಿನ ಮಲ್ಟಿಪ್ಲೆಕ್ಸ್ ಹಾಗೂ ಲಕ್ಷ್ಮಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಕನ್ನಡ ಒಕ್ಕೂಟ – ಮೈಸೂರು ವತಿಯಿಂದ ಪ್ರತಿಭಟನೆ ನಡೆಯಿತು.
ಮಾಲ್ ಆಫ್ ಮೈಸೂರು ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಈ ಚಿತ್ರ ಬಿಡುಗಡೆ ಮಾಡಿದ್ದ ಚಿತ್ರಮಂದಿರಗಳಿಗೆ ” ನಾಡ ದ್ರೋಹಿ ” ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರವಿಂದ್ ಶರ್ಮ , ಕನ್ನಡ ಕ್ರಾಂತಿದಳ ಯುವಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್ , ರೈತ ಹಿತ ಜಾಗೃತಿ ವೇದಿಕೆ ಅಧ್ಯಕ್ಷ ರಾಜೇಶ್ ಗಡಿ , ಡಾ. ರಾಜ್ ಕನ್ನಡ ಸೇನೆ ಅಧ್ಯಕ್ಷ ಮಹದೇವ ಸ್ವಾಮಿ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)