ಸುದ್ದಿ ಸಂಕ್ಷಿಪ್ತ

ಜೂ. 9 : 63ನೇ ವಿಶೇಷ ಉಪನ್ಯಾಸ

ಮೈಸೂರು,ಜೂ.8:- ಮೈಸೂರ್ ಸೈನ್ಸ್ ಫೌಂಡೇಷನ್(ರಿ) ಪ್ರತೀ ತಿಂಗಳು ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳುವ ತಿಂಗಳ ವಿಜ್ಞಾನ ಉಪನ್ಯಾಸ ಕಾರ್ಯಕ್ರಮದಡಿಯಲ್ಲಿ 63ನೇ ವಿಶೇಷ ಉಪನ್ಯಾಸವನ್ನು ಜೂ. 9ರಂದು ಸಂಜೆ 5.30 ಕ್ಕೆ ಮೈಸೂರಿನ ಕಲಾಮಂದಿರದ, ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.

“ರಸ್ತೆಯಲ್ಲಿ ಪ್ರಾಣಿಗಳ ಸಾವುಗಳಿಂದ, ರಸ್ತೆಯ ಪರಿಸರದ ಮೇಲಾಗುತ್ತಿರುವ ಪರಿಣಾಮಗಳು”ವಿಷಯ ಕುರಿತು ಎಮ್.ಕೆ.ಸಪ್ತ ಗಿರೀಶ್, ವನ್ಯಜೀವಿ ಛಾಯಾಗ್ರಾಯಕ ಮತ್ತು ಪರಿಸರವಾದಿ, ಮೈಸೂರು ಅವರು ಉಪನ್ಯಾಸ ನೀಡಲಿದ್ದಾರೆ. ಮೈಸೂರ್ ಸೈನ್ಸ್ ಫೌಂಡೇಷನ್‍ನ ಕಾರ್ಯದರ್ಶಿಗಳಾದ ಜಿ.ಬಿ. ಸಂತೋಷ್‍ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಿ.ಬಿ.ಸಂತೋಷ್‍ಕುಮಾರ್ ಮೊ:8105503863ನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: