
ಮೈಸೂರು
ಡಿ. 24: ರಾಜ್ಯಮಟ್ಟದ ಬೌದ್ಧ ಸಮಾಜ ನಿರ್ಮಾಣ ಸಂಕಲ್ಪದ ಸಮಾವೇಶ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 60 ನೇ ಪರಿನಿರ್ವಾಣ ಅಂಗವಾಗಿ ಡಿ.24 ರಂದು ರಾಜ್ಯಮಟ್ಟದ ಬೌದ್ಧ ಸಮಾಜ ನಿರ್ಮಾಣ ಸಂಕಲ್ಪದ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಸಮಿತಿಯ ವಿಭಾಗೀಯ ಸಂಚಾಲಕ ದೇವಗಳ್ಳಿ ಸೋಮಶೇಖರ್ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಮೆಡಿಕಲ್ ಕಾಲೇಜು, ಅಮೃತ ಮಹೋತ್ಸವ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ ನಾಗವಾರ, ರಾಜಶೇಖರ್ ಕೋಟೆ, ನಿಂಗರಾಜು, ವೀರೇಂದ್ರ ಕೊಡಗು ಮತ್ತಿತರರು ಹಾಜರಿದ್ದರು.