ಮೈಸೂರು

ಮೀನುಗಾರಿಕಾ ಅಭಿವೃದ್ಧಿ ಇಲಾಖೆಗೆ ಸೇರಿದ ಗೋದಾಮಿನ ಬೀಗ ಮುರಿದು ವಸ್ತು ದೋಚಿದ ಕಳ್ಳರು

ಮೈಸೂರು,ಜೂ.9:- ಸಿದ್ದಲಿಂಗಪುರದ ಮೀನುಗಾರಿಕಾ ಅಭಿವೃದ್ಧಿ ಇಲಾಖೆಗೆ ಸೇರಿದ ಗೋದಾಮಿನ ಬೀಗ ಮುರಿದು ಸುಮಾರು ಒಂದು ಲಕ್ಷರೂ.ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿಯ ಇಲಾಖೆಯ  ರೋಲಿಂಗ್ ಶಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು 10ಶೇಖರಣಾ ಬಾಕ್ಸ್ ಗಳು ಜನರೇಟರ್ ಬ್ಯಾಟರಿ, ಕಂಪ್ಯೂಟರ್, ಸಿಪಿಯು, ಮಾನಿಟರ್ ಸೇರಿದಂತೆ ಸುಮಾರು 75ಲಕ್ಷರೂ.ವೆಚ್ಚದ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ.ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: