ಮೈಸೂರು

ಎಸ್ ಬಿಎಮ್ ನಿಂದ ಡಯಾಲಿಸಿಸ್ ಯಂತ್ರ ಕೊಡುಗೆ

ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ದೇಣಿಗೆ ನೀಡಿರುವ ನೂತನ  ಐದು ಡಯಾಲಿಸಿಸ್ ಯಂತ್ರಗಳನ್ನು ಸೇವೆಗೆ ಮುಕ್ತಗೊಳಿಸಲಾಯಿತು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಚೀಫ ಜನರಲ್ ಮ್ಯಾನೇಜರ್ ಶಿವ ನೈನರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಜೆ.ಎಸ್.ಎಸ್.ಮಹಾವಿದ್ಯಾನಿಲಯದ ಕುಲಪತಿ ಡಾ.ಬಿ.ಸುರೇಶ್, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್.ಆರ್, ಜೆ.ಎಸ್.ಎಸ್.ಆಸ್ಪತ್ರೆಯ ನಿರ್ದೇಶಕ ಡಾ.ಎಂ.ಡಿ.ರವಿ, ವೈದ್ಯಕೀಯ ಅಧೀಕ್ಷಕ ಡಾ.ಗುರುಸ್ವಾಮಿ, ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಶೆಟ್ಟಿ, ಹಣಕಾಸು ಅಧಿಕಾರಿ ಭಗವಾನ್ ಮತ್ತಿತರರು ಉಪಸ್ಥಿತರಿದ್ದರು.

ಜೆ.ಎಸ್.ಎಸ್.ಆಸ್ಪತ್ರೆಯ ರೋಗಿಗಳಿಗೆ ಅನುಕೂಲವಾಗಲೆಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸುಮಾರು 20ಲಕ್ಷರೂ.ಗಳ ದೇಣಿಗೆಯನ್ನು ಐದು ಡಯಾಲಿಸಿಸ್  ಯಂತ್ರಗಳನ್ನು ಖರೀದಿಸಲು ನೀಡಿದ್ದಾರೆ.

ಈಗಾಗಲೇ ಆಸ್ಪತ್ರೆಯಲ್ಲಿ 22ಡಯಾಲಿಸಿಸ್ ಯಂತ್ರಗಳಿದ್ದು, ಅತಿಕಡಿಮೆ ದರದಲ್ಲಿ ಪ್ರತಿದಿನ ಸುಮಾರು 55ರಿಂದ 60ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ಈಗ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೀಡಿರುವ ಐದು ಡಯಾಲಿಸಿಸ್ ಯಂತ್ರಗಳಿಂದ ಒಟ್ಟು ಡಯಾಲಿಸಿಸ್ ಯಂತ್ರಗಳ ಸಂಖ್ಯೆ 27 ಆಗಿದ್ದು, ಇದರಿಂದ ಡಯಾಲಿಸಿಸ್ ಸೇವೆಯು ಮತ್ತಷ್ಟು ರೋಗಿಗಳಿಗೆ ಲಭ್ಯವಾಗಲಿದೆ. ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸಾ ಸೌಲಭ್ಯವೂ ಲಭ್ಯವಿದೆ.

Leave a Reply

comments

Related Articles

error: