ಕರ್ನಾಟಕ

“ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿ” ಗಾಗಿ ಅರ್ಜಿ ಆಹ್ವಾನ

ಬೆಂಗಳೂರು (ಜೂನ್ 9): ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವಾಲಯ, MHRD ನ್ಯೂ ದೆಹಲಿ ಯವರು ಭಾರತದಾದ್ಯಂತ “ ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿ) ಗಳಿಗೆ ಅರ್ಜಿ ಆಹ್ವಾನಿಸಿದ್ದು, ಶಿಕ್ಷಣದಲ್ಲಿ ಐಸಿಟಿ ಬಳಸಿಕೊಂಡು ಹೊಸತನ್ನು ಪರಿಚಯಿಸಿದ ಉತ್ತಮ ಶಿಕ್ಷಕರಿಗೆ ಮತ್ತು ಯುವ ಶಿಕ್ಷಕರು ಪರಿಣಾಮಕಾರಿಯಾಗಿ ಮತ್ತು ನೂತನ ಸಮಗ್ರ ತಾಂತ್ರಿಕ ಆಧಾರಿತ ಕಲಿಕೆಯ ಮೂಲಕ ಉನ್ನತಗೊಲಿಸಿರುವವರಿಗೆ ಹಾಗೂ ಅದರಂತೆ ವಿಚಾರಣೆ ಆಧಾರಿತ ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕಲಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ.

ರಾಜ್ಯು ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಮಾಧ್ಯಮಿಕ ಶಾಲಾ ಶಿಕ್ಷಕರಿಂದ, ಸ್ಥಳೀಯ ಸಂಸ್ಥೆಗಳು ನಡೆಸುವ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳು, ಕೇಂದ್ರ ಸರ್ಕಾರದ ಶಾಲೆಗಳಾದ ಕೇಂದ್ರೀಯ ವಿದ್ಯಾಲಯ (ಕೆವಿಎಸ್) ಜವಾಹರಲಾಲ್ ನವೋದಯ ವಿದ್ಯಾಲಯಗಳು (ಜೆಎನ್‍ವಿಎಸ್), ರಕ್ಷಣಾ ಸಚಿವಾಲಯ ನಡೆಸುವ ಕೇಂದ್ರೀಯ ಟಿಬೇಟಿಯನ್ ಶಾಲೆಗಳು (ಎಂಓಡಿ) ಅಣುಶಕ್ತಿ ಆಯೋಗ (ಎಇಎಸ್) (3) ಭಾರತೀಯ ಶಾಲಾ ಪರೀಕ್ಷೆಗಳ ಪ್ರಮಾಣಪತ್ರ ಮಂಡಳಿ (ಸಿಐಎಸ್‍ಸಿಇ) ಪರವಾನಗಿ ಪಡೆದ ಶಾಲೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ನಿರ್ದೇಶಕರು, ಡಿಎಸ್‍ಇಆರ್‍ಟಿ, # 4, 100 ಅಡಿ ವರ್ತುಲ ರಸ್ತೆ ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ, ಬೆಂಗಳೂರು – 85 ಇವರಿಗೆ ದಿನಾಂಕ: 30-06-2018 ರೊಳಗೆ ತಲುಪುವಂತೆ ಕಳುಹಿಸಬೇಕು. ದಿನಾಂಕ: 30-06-2018 ರ ನಂತರ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು http://www.ciet.nic.in/# ವೆಬ್‍ಸೈಟ್‍ನ ICT Awards ಇಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. (ಎನ್.ಬಿ)

Leave a Reply

comments

Related Articles

error: