ಕ್ರೀಡೆ

ಐಸಿಸಿ ಟಿ20 ರ್ಯಾಂಕಿಂಗ್: ಅಗ್ರಸ್ಥಾನದಲ್ಲಿ ರಶೀದ್ ಖಾನ್

ದುಬೈ,ಜೂ.9-ಆಫ್ಘಾನಿಸ್ತಾದ ರಶೀದ್ ಖಾನ್ ಐಸಿಸಿ ಟಿ20 ಬೌಲರ್ ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಸದ್ಯ ರಶೀದ್ 812 ಅಂಕಗಳನ್ನು ಪಡೆದು ಮೊದಲನೇ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶದಾಬ್ ಖಾನ್‌ಗಿಂತ 80 ಅಂಕ ಹೆಚ್ಚು ಹೊಂದಿದ್ದಾರೆ.

ಗುರುವಾರ ಮುಕ್ತಾಯಗೊಂಡ ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ರಶೀದ್ 12 ವಿಕೆಟ್‌ಗಳನ್ನು ಕಬಳಿಸಿದರು. ಈ ಪ್ರದರ್ಶನದೊಂದಿಗೆ 19 ವರ್ಷದ ಸ್ಪಿನ್ನರ್ 54 ಅಂಕಗಳನ್ನು ಸಂಪಾದಿಸಿದರು. ತಂಡಗಳ ರ್ಯಾಕಿಂಗ್‌ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ.

ಐಪಿಎಲ್ 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ರಶೀದ್ ಖಾನ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು. ಬ್ಯಾಟಿಂಗ್ ನಲ್ಲಿ 10 ಎಸೆತಗಳಲ್ಲಿ ಅಜೇಯ 34 ರನ್ ಸಿಡಿಸಿದ್ದರು. ಇನ್ನು ಬೌಲಿಂಗ್ ನಲ್ಲಿ 4 ಓವರ್ ನಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಗಳನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. (ಎಂ.ಎನ್)

Leave a Reply

comments

Related Articles

error: