
ಕರ್ನಾಟಕ
2.18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ರಾಜ್ಯ(ಮಡಿಕೇರಿ) ಜೂ.9 :- ಸುಮಾರು 2.18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ರೂ.36,000 ನಗದು ದೋಚಿರುವ ಪ್ರಕರಣ ಬಾಳುಗೋಡು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ವಿರಾಜಪೇಟೆ ಬಳಿಯ ಬಾಳುಗೋಡು ನಿವಾಸಿ ಎನ್.ಎ.ತಿಮ್ಮಯ್ಯನವರು ಬೆಂಗಳೂರಿನಲ್ಲಿ ವಾಸವಿದ್ದು ಬಾಳುಗೋಡಿನಲ್ಲಿ ಬಾಡಿಗೆ ಮನೆ ಮಾಡಿ ತೋಟಕ್ಕೆ ಬಂದು ಹೋಗುತ್ತಿದ್ದರು. ಕೆಲವು ದಿನಗಳ ಹಿಂದೆ ಬಂದಿದ್ದ ಅವರು ಮರಳಿ ಬೆಂಗಳೂರಿಗೆ ಹೋಗಿದ್ದ ಸಂದರ್ಭವನ್ನು ಹೊಂಚು ಹಾಕಿದ ಚೋರರು ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ರೂ.36 ಸಾವಿರ ನಗದು ಸೇರಿದಂತೆ ಒಟ್ಟು ರೂ.2,18 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ದೂರು ದಾಖಲಾಗಿದೆ. ಬಾಡಿಗೆಗಿದ್ದ ಮನೆಯ ಮಾಲೀಕರ ಅಣ್ಣ ರಮೇಶ್ ಅವರು ತಿಮ್ಮಯ್ಯನವರಿಗೆ ಕರೆ ಮಾಡಿ ಅವರ ಬಾಡಿಗೆ ಮನೆಯ ಬೀಗ ಮುರಿದಿರುವುದಾಗಿ ತಿಳಿಸಿದ ಹಿನ್ನೆಲೆ ತಿಮ್ಮಯ್ಯ ಅವರು ತಕ್ಷಣ ಬಂದು ನೋಡಿದಾಗ ನಗದು ಹಾಗೂ ಚಿನ್ನಾಭರಣ ಕಳವಾಗಿರುವುದು ಕಂಡು ಬಂದಿದೆ. ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. (ಕೆಸಿಐ,ಎಸ್.ಎಚ್)