ಮೈಸೂರು

ಪ್ರೊ. ಸಿ. ಬಸವರಾಜು ಮತ್ತೆ ಕುಲಸಚಿವರು

ಮೈಸೂರು ವಿಶ್ವವಿದ್ಯಾನಿಲಯದ ಆಡಳಿತಾಂಗ ಕುಲಸಚಿವರಾಗಿ ಪ್ರೊ. ಡಾ.ಸಿ. ಬಸವರಾಜು ಮತ್ತೆ ನೇಮಕಗೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಅಮಾನತುಗೊಂಡಿದ್ದ ಮೈಸೂರು ವಿವಿಯ ಕುಲಸಚಿವರಾಗಿದ್ದ ಪ್ರೊ. ಸಿ. ಬಸವರಾಜು ಅವರ ಅಮಾನತು ಆದೇಶವನ್ನು ರದ್ದುಪಡಿಸಲಾಗಿದ್ದು, ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ.

ಯುವರಾಜ ಕಾಲೇಜಿನಲ್ಲಿ ಉಪನ್ಯಾಸಕರ ಅಕ್ರಮ ನೇಮಕ ಪ್ರಕರಣದಲ್ಲಿ ಸರ್ಕಾರ ಬಸವರಾಜು ಅವರನ್ನು ಅಮಾನತುಗೊಳಿಸಿ, ಪ್ರೊ. ಆರ್. ರಾಜಣ್ಣ ಅವರನ್ನು ಆಡಳಿತ ಕುಲಸಚಿವರನ್ನಾಗಿ ನೇಮಿಸಿತ್ತು.

ಪ್ರಕರಣದ ಕುರಿತು ಬಂದ ವರದಿಯಲ್ಲಿ ಬಸವರಾಜು ಅವರ ತಪ್ಪಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಬಸವರಾಜು ಅವರನ್ನು ಮತ್ತೆ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದ್ದು, ಪ್ರೊ. ಆರ್. ರಾಜಣ್ಣ ಅವರನ್ನು ಮೌಲ್ಯಮಾಪನ ವಿಭಾಗದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.

Leave a Reply

comments

Related Articles

error: