ಮೈಸೂರು

ತಾಂತ್ರಿಕ ವಿದ್ಯಾರ್ಥಿಗಳಿಗೆ ಜೀವವಿಜ್ಞಾನದ ಅರಿವು ಅಗತ್ಯ: ಡಾ. ಕರಿಸಿದ್ದಪ್ಪ

ತಾಂತ್ರಿಕ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಜೀವ ವಿಜ್ಞಾನದ ಅರಿವು ಅಗತ್ಯ. ಜೀವವಿಜ್ಞಾನ ಅಧ್ಯಯನ ಮಾಡಿದರೆ ಸಂಶೋಧನೆಗೆ ಸಹಕಾರಿಯಾಗಲಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ಕುಲಪತಿ ಡಾ. ಕರಿಸಿದ್ಧಪ್ಪ ತಿಳಿಸಿದರು.

ಮೈಸೂರಿನ ಜಿ.ಎಸ್.ಎಸ್.ಎಸ್. ಮಹಿಳೆಯರ ತಾಂತ್ರಿಕ ಕಾಲೇಜಿನಲ್ಲಿ ಏರ್ಪಡಿಸಲಾದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಷನ್ ಕಂಪ್ಯೂಟರ್ ಕುರಿತ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಡಾ. ಕರಿಸಿದ್ದಪ್ಪ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಎಂಜಿನಿಯರಿಂಗ್ ವಿಷಯಗಳೊಂದಿಗೆ ಜೀವವಿಜ್ಞಾನ ಸಂಯೋಜನೆಗೊಳ್ಳಬೇಕು. ಈ ಕುರಿತು ಚಿಂತನೆ ನಡೆಯಬೇಕಾಗಿದೆ ಎಂದು ಹೇಳಿದರು.

ರಿಪಬ್ಲಿಕ್ ಆಫ್ ಮಾರಿಷಸ್ ದೇಶದ ಮಾರಿಷಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಕೃಷ್ಣರಾಜ್ ಮಾಧವಜೀ ಸುಂಜೀವ್ ಸೊಯ್ ಜೌಧ  ಮಾತನಾಡಿ ತಾಂತ್ರಿಕ ಕಾಲೇಜುಗಳಲ್ಲಿ ತಂತ್ರಜ್ಞಾನ ಮತ್ತಷ್ಟು ಸುಧಾರಣೆಯಾಗಬೇಕು. ಮಾರಿಷಸ್ ದೇಶದಲ್ಲಿ ತಾಂತ್ರಿಕ ಕಾಲೇಜುಗಳಿಗೆ ಸಂಬಂಧಿಸಿದಂತೆ ಹಲವು ವಿಶೇಷ ರೀತಿ ನೀತಿಗಳಿದ್ದು ಅವುಗಳನ್ನು ಭಾರತೀಯ ಕಾಲೇಜುಗಳೂ ಅಳವಡಿಸಿಕೊಂಡರೆ ಇನ್ನಷ್ಟು ಅಭಿವೃದ್ಧಿ ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ಐಇಇಇ ಕಂಪ್ಯೂಟರ್ ಸೊಸೈಟಿಯ ಅಧ್ಯಕ್ಷ ಬಿ.ಎಸ್. ಬಿಂದು ಮಾಧವ, ಜಿಎಸ್ಎಸ್ಎಸ್ ಕಾಲೇಜಿನ ಕಾರ್ಯದರ್ಶಿ ವನಜಾ ಬಿ. ಪಂಡಿತ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್.ಕೆ. ಭರತ್ ಪ್ರಾಂಶುಪಾಲೆ ಡಾ. ಕೆ.ಎ. ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: