ಮೈಸೂರು

ಇನೋವಾ ಕಾರು ಮತ್ತು  ಮೊಬೈಕ್ ನಡುವೆ ಡಿಕ್ಕಿ : ಮಹಿಳೆ ಸಾವು

ಮೈಸೂರು,ಜೂ.10:-  ಇನೋವಾ ಕಾರು ಮತ್ತು  ಟಿವಿಎಸ್ ಎಕ್ಸ್ ಎಲ್ ನಡುವೆ ಡಿಕ್ಕಿ ಸಂಭವಿಸಿ  ಬೈಕ್ ನಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಂಜನಗೂಡು ರಸ್ತೆಯ ಎರ್ ಪೋರ್ಟ್ ಬಳಿ  ನಡೆದಿದೆ.

ಮೃತ ಮಹಿಳೆಯನ್ನು ಮಾರಮ್ಮ(45) ಎಂದು ಹೇಳಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಊಟಿ ಕಡೆಯಿಂದ ಬರುತ್ತಿದ್ದ ಇನೋವಾ ಕಾರು ಅತಿವೇಗದಿಂದ ಬರುತ್ತಿದ್ದು,  ಅತಿ ವೇಗವೇ  ಅಪಘಾತಕ್ಕೆ ಕಾರಣ  ಎಂದು ಆರೋಪಿಸಿ ಸ್ಥಳೀಯರು  ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಮಹಿಳೆ ಮೃತದೇಹವನ್ನು  ಕೆ.ಆರ್. ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: