ಮೈಸೂರು

ಸಂಭ್ರಮದಲ್ಲಿ ನಡೆದ ಗಾಣಿಗರ ಸಂಘದ 23ನೇ ವರ್ಷದ ವಾರ್ಷಿಕೋತ್ಸವ

ಮೈಸೂರು,ಜೂ.10:-  ಮೈಸೂರು ನಗರದ ಗಾಣಿಗರ ಸಂಘದ ವತಿಯಿಂದ 23ನೇ ವರ್ಷದ ವಾರ್ಷಿಕೋತ್ಸವವನ್ನು  ಇಂದು ನಗರದ ಜೆ ಕೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರಿಗೆ,ವೃದ್ಧರಿಗೆ,ಹಾಗೂ ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು  ಹಮ್ಮಿಕೊಳ್ಳಲಾಗಿತ್ತು.  ಮಕ್ಕಳ ಥ್ರೋ ಬಾಲ್ ಕ್ರೀಡೆಯಲ್ಲಿ  ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ  ಅರವಿಂದ್ ಶರ್ಮ , ಮೈಸೂರು ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಡೈರಿ ವೆಂಕಟೇಶ್  ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿದರು.  ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಟಿ.ಎನ್.ತಿರುಮಲೈ , ಗಾಣಿಗರ ಮುಖಂಡರಾದ ಟಿ.ತ್ಯಾಗರಾಜ್ ಉಪಸ್ಥಿತರಿದ್ದರು . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: