ಮೈಸೂರು

ಲಿಂಗಾಂಬುಧಿ ಕೆರೆಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ : ಪರಿಶೀಲನೆ

ಮೈಸೂರು,ಜೂ.11:- ಲಿಂಗಾಂಬುಧಿ ಕೆರೆಗೆ ಒಳಚರಂಡಿ ನೀರು ಸೇರಿ ಕೆರೆ ಮತ್ತು ಪರಿಸರ ಹಾಳಾಗುತ್ತಿದ್ದು, ಸ್ಥಳಕ್ಕೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ಶ್ರೀರಾಂಪುರದ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀರಾಂಪುರದ ಲಿಂಗಾಬುಧಿಯ ಕೆರೆಯ ಸಮೀಪ ಭೇಟಿ ನೀಡಿದ ರಾಮದಾಸ್ ಅವರು ಒಳಚರಂಡಿ ಮ್ಯಾನ್ ಹೋಲ್ ನಿಂದ ಚರಂಡಿ ನೀರು ಸೋರಿಕೆಯಾಗಿ ಹೊಂಡದ ಮೂಲಕ ನೇರವಾಗಿ ಲಿಂಗಾಬುಧಿ ಕೆರೆಗೆ ಸೇರುತ್ತಿದ್ದು, ಇದರಿಂದಾಗಿ ಕೆರೆ, ಪರಿಸರ ಮತ್ತು ಕೆರೆ ಭರ್ತಿಯಾಗಿ ತಾತ್ಕಾಲಿಕವಾಗಿ ಅಳವಡಿಸಿರುವ ಮರಳಿನ ಮೂಟೆಗಳು ಛಿದ್ರಗೊಂಡು ಕೆರೆಯ ನೀರು ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗುವ ಆತಂಕವಿದ್ದು, ಅಧಿಕಾರಿಗಳಿಗೆ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ತಿಳಿಸಿದರು. ಈ ಕುರಿತು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭ ಮಹಾನಗರ ಪಾಲಿಕೆಯ ಅಧಿಕಾರಿಗಳು, ಮೂಡಾ ಅಧಿಕಾರಿಗಳು, ಸಂಬಂಧಪಟ್ಟ ಇತರ ಇಲಾಖಾಧಿಕಾರಿಗಳಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: