ಕರ್ನಾಟಕ

ಸ್ಟೇರಿಂಗ್ ನಲ್ಲಿ ತೊಂದರೆ : ಮನೆಗೆ ನುಗ್ಗಿದ ಬಸ್

ರಾಜ್ಯ(ಹಾಸನ)ಜೂ.11:- ಸಾರಿಗೆ ಬಸ್ಸೊಂದು ಸ್ಟೇರಿಂಗ್ ನಲ್ಲಿ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ರಸ್ತೆ ಬಿಟ್ಟು ಮನೆಗೆ ನುಗ್ಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.

ಸಾರಿಗೆ ಬಸ್ ಹಾಸನದಿಂದ ಮೈಸೂರಿಗೆ ತೆರಳುತಿತ್ತು. ಈ ವೇಳೆ ಹೊಳೆನರಸೀಪುರ ಮಾರ್ಗದಲ್ಲಿ ಬರುತ್ತಿದ್ದಂತೆಯೇ ಬಸ್ ನ ಸ್ಟೇರಿಂಗ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆ ಬಿಟ್ಟು ಮನೆಗೆ ನುಗ್ಗಿದೆ. ಬಸ್  ಮನೆಗೆ ನುಗ್ಗಿ ಮನೆಯ ಮುಂಭಾಗದ ಛಾವಣಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಿಂದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: