ಮೈಸೂರು

ಮಂಜಿನ ನಗರಿಯಾದ ಮೈಸೂರು

ಮುಂಜಾನೆಯ ನಸುಕಿನಲ್ಲಿ ರವಿ ತನ್ನ ಕಿರಣಗಳನ್ನು ಪ್ರಕೃತಿಯ ಮೇಲೆ ಚೆಲ್ಲಾಡಿರುತ್ತಿದ್ದ. ಆದರೆ ಶನಿವಾರ ರವಿಯ ಕಿರಣಗಳು ಭೂತಾಯಿಯನ್ನು ಸೇರಲು ಪ್ರಯಾಸ ಪಡಬೇಕಾಯಿತು. ಸಾಂಸ್ಕೃತಿಕ ನಗರಿ ಮೈಸೂರನ್ನು ದಟ್ಟವಾದ ಮಂಜು ಆವರಿಸಿದ್ದು, ಮಂಜಿನ ನಗರಿಯಂತೆ ಕಂಗೊಳಿಸಿತು.

ಸುತ್ತಲೂ ಆವರಿಸಿದ ಮಂಜಿನ ಮುಂದೆ ಏನೇನೂ ಕಾಣಿಸದಂತಹ ಸ್ಥಿತಿ ನಿರ್ಮಾಣವಾಗಿತ್ತು. ಚುಮುಚುಮು ಚಳಿಯ ಜೊತೆ ದಟ್ಟೈಸಿದ ಮಂಜಿನ ಹೊದಿಕೆಯಡಿ ಮೈಸೂರಿನ ಜನತೆ ಶನಿವಾರ ಹೆಜ್ಜೆ ಹಾಕುತ್ತಿದ್ದರು. ಗಿಡ-ಮರಗಳ ಹಸಿರೆಲೆಗಳ ಮೇಲೆ ಮುತ್ತು ಪೋಣಿಸಿದಂತೆ ಇಬ್ಬನಿಗಳು ಮೇಳೈಸಿದ್ದವು. ವಾಹನ ಸವಾರರು ಲೈಟ್ ಗಳನ್ನು ಹಾಕಿ ವಾಹನ ಚಾಲನೆ ಮಾಡಬೇಕಾಗಿ ಬಂತು.

ಬೆಳಿಗ್ಗೆ ಸುಮಾರು 9 ಗಂಟೆಯವರೆಗೂ ಇದೇ ವಾತಾವರಣವಿದ್ದು, ರವಿಯ ಕಿರಣಗಳು ಪ್ರಖರವಾಗುತ್ತಿದ್ದಂತೆ ಮಂಜು ಕಾಣಿಸದಂತಾಗಿ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

Leave a Reply

comments

Related Articles

error: