
ಮನರಂಜನೆ
ಜುಲೈ 7ಕ್ಕೆ ಮಿಮೋಹ್ ಚಕ್ರವರ್ತಿ ವೆಡ್ಸ್ ಮಾದಲ್ಸಾ ಶರ್ಮಾ
ಮುಂಬೈ,ಜೂ.11-‘ಡಿಸ್ಕೋ ಡ್ಯಾನ್ಸರ್’ ಎಂದೇ ಹೆಸರು ವಾಸಿಯಾಗಿರುವ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಮಗ ಮಿಮೋಹ್ ಜುಲೈ 7ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮಿಮೋಹ್, ಬಹುಭಾಷಾ ನಟಿ ಮಾದಲ್ಸಾ ಶರ್ಮಾ ಅವರನ್ನು ವಿವಾಹವಾಗಲಿದ್ದಾರೆ. ಈ ಜೋಡಿ ಎರಡು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಮಾದಲ್ಸಾ ಶರ್ಮಾ ಬಾಲಿವುಡ್ ನಟಿ ಶೀಲಾ ಶರ್ಮಾ ಅವರ ಪುತ್ರಿ. ಶೀಲಾ ಶರ್ಮಾ ‘ಹಮ್ರಾಝ್’, ‘ಅಜ್ನಬೀ’, ‘ಯಸ್ ಬಾಸ್’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ.
ಶೀಲಾ ಶರ್ಮಾ ಕುಟುಂಬ ಹಾಗೂ ಮಿಥುನ್ ಚಕ್ರವರ್ತಿ ಫ್ಯಾಮಿಲಿ ನಡುವೆ ಆತ್ಮೀಯತೆ ಇದೆ. ಇದೇ ಆತ್ಮೀಯತೆ ಇದೀಗ ಎರಡೂ ಕುಟುಂಬಗಳನ್ನ ಸಂಬಂಧಿಗಳಾಗುವಂತೆ ಮಾಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಮಿಮೋಹ್-ಮಾದಲ್ಸಾ ಶರ್ಮಾ ನಿಶ್ಚಿತಾರ್ಥ ನಡೆದಿತ್ತು. ಮುಂದಿನ ತಿಂಗಳು ವಿವಾಹ ಮಹೋತ್ಸವ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಆಪ್ತರಿಗಷ್ಟೇ ವಿವಾಹಕ್ಕೆ ಆಹ್ವಾನ ನೀಡಲಿದ್ದಾರೆ. ಮದುವೆ ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಕುಟುಂಬಗಳು ಮಾಹಿತಿ ಬಿಟ್ಟುಕೊಟ್ಟಿಲ್ಲ. ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಮಾದಲ್ಸಾ ಶರ್ಮಾ ಹಿಂದಿ, ತೆಲುಗು, ತಮಿಳು, ಪಂಜಾಬಿ, ಜರ್ಮನ್ ಹಾಗೂ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಶೌರ್ಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. (ಎಂ.ಎನ್)