ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿಮಂಡಲದ ಪದಗ್ರಹಣ

ಮೈಸೂರು, ಜೂ.11:-ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿಮಂಡಲದ ರಚನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಇಂದು ಯಶಸ್ವಿಯಾಗಿ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಸ್ಥಾಪಕರಾದ ಟಿ.ರಂಗಪ್ಪ ವಹಿಸಿದ್ದರು. ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಮಂತ್ರಿಮಂಡಲದಲ್ಲಿ ಮಂತ್ರಿಗಳು ಹಾಗೂ ನಾಯಕರುಗಳಿಗೆ ಗುರುತರವಾದ ಜವಾಬ್ದಾರಿಯಿರುತ್ತದೆ. ವಿದ್ಯಾರ್ಥಿಗಳು ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು. ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ನಿರಂತರವಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾ ತಾವು ಕೂಡಾ ತಮ್ಮ ಪಠ್ಯ ಚಟುವಟಿಕೆಗಳಲ್ಲಿ ಹಿಂದುಳಿಯಬಾರದು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲರಾದ ಶ್ರೀಧರ್ ಮಾತನಾಡಿ, ಪ್ರತಿಯೊಬ್ಬ ಮಂತ್ರಿಗಳು ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದ 5 ಮಹಾನ್ ನಾಯಕರುಗಳ ಬಗ್ಗೆ ತಿಳಿದುಕೊಳ್ಳಬೇಕು. ಉದಾಹರಣೆ ಯುವಜನ ನಾಯಕರು ಸ್ವಾಮಿ ವಿವೇಕಾನಂದರ ಸಾಧನೆ, ಆರೋಗ್ಯ ಸಚಿವರು ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯರು ಹಾಗೂ ಹಿಂದಿನ ಕಾಲದ ಚರಕ, ಸುಶ್ರುತ ಮುಂತಾದವರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಜರೀನಾ ಬಾಬುಲ್‍ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಂದ ನೆರವೇರಿಸಿದರು. ಯು.ಮೌನ ಮುಖ್ಯಮಂತ್ರಿಯಾಗಿ, ಎಂ.ಎನ್. ಗುಣವತಿ ಉಪಮುಖ್ಯಮಂತ್ರಿಯಾಗಿ, ಪಿ.ಸಿಂಚನ  ಮಂತ್ರಿಮಂಡಲದ ಕಾರ್ಯದರ್ಶಿಯಾಗಿ, ಎಸ್.ಗಿರೀಶ್ ಶಿಕ್ಷಣ ಸಚಿವರಾಗಿ, ಡಿ.ಎನ್.ಶ್ವೇತ ಗೃಹ ಸಚಿವರಾಗಿ, ಪಿ.ಮನ್ವಿತ್  ಸಾಂಸ್ಕೃತಿಕ ಸಚಿವರಾಗಿ, ಕೆ.ಆರ್.ಮೋನಿಕಾ ಹಣಕಾಸು ಸಚಿವರಾಗಿ, ಆರ್.ಎನ್.ಶರತ್ ಯುವಜನ ಸಚಿವರಾಗಿ, ಎಂ.ಮನೋಜ್ ಕುಮಾರ್ ಆರೋಗ್ಯ ಸಚಿವರಾಗಿ, ಸಿಮ್ರಾನ್ ಸಿಂಗ್ ಶಾಲಾ ಮುಖ್ಯಸ್ಥರಾಗಿ, ಪಿ.ತೇಜಸ್  ಹೆಡ್ ಬಾಯ್ ಆಗಿ, ಪಿ.ಎಂ.ಮೋನಿಕಾ ಹೆಡ್ ಗರ್ಲ್ ಆಗಿ, ಜೆ.ದೀಕ್ಷಿತ್ ಧ್ವಜಧಾರಕನಾಗಿ ನೇಮಕಗೊಂಡರು. ಉಪಹೆಡ್ ಬಾಯ್ ಆಗಿ ಎನ್. ಕಿರಣ್, ಉಪ ಹೆಡ್ ಗರ್ಲ್ ಆಗಿ ಎಸ್.ಅಮೃತ, ಕ್ರೀಡಾ ನಾಯಕನಾಗಿ ಕೆ.ತರುಣ್, ಶಿಸ್ತು ಪಾಲನಾ ನಾಯಕನಾಗಿ ಎಂ.ಕೆ.ಸಾಯಿದರ್ಶನ್, ಆಹಾರದ ನಿರೀಕ್ಷಣಾಧಿಕಾರಿಯಾಗಿ ಎಸ್.ಭೂಮಿಕಾ, ಆರೋಗ್ಯ ಹಾಗೂ ನೈರ್ಮಲ್ಯ ನಾಯಕನಾಗಿ ನಿತಿನ್ ಭಾಗವತ್, ನೇಮಕಗೊಂಡರು. ಇನ್ನಿತರ ಗುಂಪುಗಳಲ್ಲಿ ಭಗತ್ ಸಿಂಗ್ ಗುಂಪಿನ ಅಧ್ಯಕ್ಷರಾಗಿ ಎಂ.ಎನ್.ಸುಹಾಸ್, ಸ್ವಾಮಿ ವಿವೇಕಾನಂದ ಗುಂಪಿನ ಅಧ್ಯಕ್ಷರಾಗಿ ಎಸ್.ಅರ್ಚನ, ಸುಭಾಷ್ ಚಂದ್ರ ಗುಂಪಿನ ಅಧ್ಯಕ್ಷರಾಗಿ ಧನುಶ್ ವಿಶ್ವಕರ್ಮ ಹಾಗೂ ಬಾಲಗಂಗಾಧರ ತಿಲಕ್ ಗುಂಪಿನ ಅಧ್ಯಕ್ಷರಾಗಿ ಯು.ರುಚಿತ ನೇಮಕಗೊಂಡರು. ಇತರ ಪೈಲೆಟ್‍ಗಳಾಗಿ ಮೊಹಮ್ಮದ್ ಆಶಿಕ್, ಪಂಚಮಿ, ಕೆ.ಪಿ.ವರ್ಷಿತ, ವಿಘ್ನೇಶ್, ಭಾಗ್ಯಲಕ್ಷ್ಮಿ, ಶೃಂಗಾರ್ ನೇಮಕಗೊಂಡರು.

ಕಾರ್ಯಕ್ರಮದ ನಿರೂಪಣೆಯನ್ನು ಆಶಾ ನೆರವೇರಿಸಿದರು. ಸ್ವಾಗತ ಹಾಗೂ ವಂದನಾರ್ಪಣೆಯನ್ನು ಚೈತ್ರ ಹಾಗೂ ರಾಜೇಶ್ವರಿಯವರು ನೆರವೇರಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: