ಮೈಸೂರು

ನಾಳೆ ನಂಜನಗೂಡಿನ ಕಪಿಲ ನದಿ ಸ್ವಚ್ಛತೆ ಕಾರ್ಯಕ್ರಮ

ಮೈಸೂರು,ಜೂ.11 : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.12ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗದ ಕಪಿಲ ನದಿ ಸ್ನಾನ ಘಟಕದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿದೆ.

ನಾಳೆ ಬೆಳಗ್ಗೆ 11ಕ್ಕೆ ಶಾಸಕ ಡಾ.ಹರ್ಷವರ್ಧನ್ ಉದ್ಘಾಟಿಸುವರು. ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಭಾಗಿಯಾಗುವರು.

ಎಂಪಿ ನಿರ್ದೇಶಕ ಡಾ.ಕೆ.ಹೆಚ್.ವಿನಯಕುಮಾರ್ ನೇತೃತ್ವದಲ್ಲಿ ಪರಿಸರ ಜಾಗೃತಿಗಾಗಿ ಮಿನಿ ಮ್ಯಾರಾಥಾನ್, ನದಿ ಸ್ವಚ್ಚತೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: