ಮೈಸೂರು

 ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಜೂ.15ರಂದು ವಿದ್ವಾನ್ ಪಟ್ಟಾಭಿರಾಮ ಅವರ ಗಾಯನ ಹಾಗೂ ಕೊಳಲಿನ ಯುಗಳ ಕಚೇರಿ

ಮೈಸೂರು,ಜೂ.11:- ಕುವೆಂಪುನಗರದ  ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಜೂ.15ರಂದು ಸಂಜೆ 6ಗಂಟೆಗೆ ವಿದ್ವಾನ್ ಪಟ್ಟಾಭಿರಾಮ ಅವರ ಗಾಯನ  ಹಾಗೂ  ಕೊಳಲಿನ ಯುಗಳ ಕಚೇರಿ ನಡೆಯಲಿದ್ದು, ಪಿಟೀಲು ಚೌಡಯ್ಯ ವಂಶಸ್ಥರಾದ ಚಂದನ್ ಕುಮಾರ್ ಕೊಳಲು ನುಡಿಸಲಿದ್ದು, ವಿದ್ವಾನ್ ಚಾರುಲತಾ ರಾಮಾನುಜಂ ವಯೋಲಿನ್, ವಿದ್ವಾನ್ ಹೆಚ್.ಎಸ್.ಸುಧೀಂದ್ರ ಮೃದಂಗ, ವಿದ್ವಾನ್ ಜಿ.ಎಸ್.ರಾಮಾನುಜಂ ಘಟಂ ನುಡಿಸಲಿದ್ದಾರೆ.

ಕಲಾವಿದರ ಕಿರು ಪರಿಚಯ 

ವಿದ್ವಾನ್ ಪಟ್ಟಾಭಿರಾಮ ಪಂಡಿತರು ಚಿಕ್ಕ ವಯಸ್ಸಿನಲ್ಲಿಯೇ ಸ್ವರಗಳ ಮೋಡಿಗೆ ಸಿಲುಕಿದವರು. ವಿ.ವಲ್ಲಭಂಕಲ್ಯಾಣ ಸುಂದರಂ, ವಿ.ಎಸ್.ರಾಮನಾಥನ್ ಮತ್ತು ವಿ.ಕೆ.ವಿ.ನಾರಾಯಣಸ್ವಾಮಿಯವರ ಗರಡಿಯಲ್ಲಿ ತಯಾರಾದ ಇವರು ಇಂದು ಯುವ ವಿದ್ವಾಂಸರು ಮುಂಚೂಣಿಯಲ್ಲಿದ್ದಾರೆ. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ವಿಫುಲವಾಗಿ ತಮ್ಮಗಾಯನ ಕಛೇರಿಯನ್ನು ನಡೆಸುತ್ತಿರುವ ಇವರಿಗೆ ಅನೇಕ ಬಿರುದು, ಸನ್ಮಾನಗಳು ಸಂದಿವೆ. ಉಸ್ತಾದ್ ಬಿಸ್ಮಿಲ್ಲ ಖಾನ್‍ ಯುವ ಪುರಸ್ಕಾರ್, ‘ಕರ್ನಾಟಕ ಗಾನಕಲಾಶ್ರೀ’ ‘ಅತ್ಯುತ್ತಮಗಾಯಕ’ ಮುಂತಾದವು ಕೆಲವು ಮಾತ್ರ. ತಮ್ಮತಲ್ಲೀನ ಗಾಯನದಿಂದ ಕೇಳುಗರನ್ನು ಮೋಡಿ ಮಾಡುವ ಶಕ್ತಿ ಇವರದು.

ಚಂದನ್ ಕುಮಾರ್

ಪ್ರಖ್ಯಾತ ಪಿಟೀಲು ಚೌಡಯ್ಯನವರ ವಂಶಸ್ಥರಾದ ಚಂದನ್‍ಕುಮಾರ್‍ ಅವರು ಯುವ ವಂಶಿಕರಲ್ಲಿ ಎದ್ದು ಕಾಣುವ ಹೆಸರಿನವರು. ವಿದ್ವಾನ್ ಗೋಪಾಲಕೃಷ್ಣ  ಅವರಲ್ಲಿ ಕೊಳಲು ವಾದನವನ್ನು ಕಲಿತ ಇವರು ವಿದ್ವಾನ್‍ಪಿ.ಎಸ್.ನಾರಾಯಣಸ್ವಾಮಿ ಅವರಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಆಕಾಶವಾಣಿ ಮತ್ತು ದೂರದರ್ಶನದ ಟಾಪ್‍ಗ್ರೇಡ್‍ ಕಲಾವಿದರಾದ ಇವರು ಆಕಾಶವಾಣಿಯ ಸಂಗೀತ ಸಮ್ಮೇಳನದಲ್ಲೂ ತಮ್ಮ ಕೊಳಲು ವಾದನವನ್ನು ನಡೆಸಿಕೊಟ್ಟಿದ್ದಾರೆ. ದೇಶ ವಿದೇಶಗಳಲ್ಲಿ ಇವರ ಕಛೇರಿಗಳು ನಡೆಯುತ್ತಲೇ ಇವೆ. ‘ಮಹಾಲಿಂಗಂ ಪದ್ಮನಾಭನ್ ಪ್ರಶಸ್ತಿ’, ಉಸ್ತಾದ್ ಬಿಸ್ಮಿಲ್ಲ ಖಾನ್‍ ಯುವ ಪುರಸ್ಕಾರ್, ‘ಸಾರ್ಥಕ ಸೇವಾ ಭೂಷಣ’ಮುಂತಾದ ಅನೇಕ ಸನ್ಮಾನಗಳಿಗೆ ಭಾಜನರಾದ ಇವರು ಹಲವಾರು ಧ್ವನಿ ಮುದ್ರಿಕೆಗಳನ್ನೂ ಹೊರತಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: