ಮೈಸೂರು

ವ್ಯಾಪಾರ ಸೋಗಿನಲ್ಲಿ ಬಂದು ರೇಷ್ಮೆ ಸೀರೆ ಅಪಹರಿಸಿದ ಬುರ್ಖಾಧಾರಿ ಮಹಿಳೆಯರು

ಮೈಸೂರು,ಜೂ.12:- ಬುರ್ಖಾಧಾರಿ ಅಪರಿಚಿತ ಮಹಿಳೆಯರಿಬ್ಬರು ವ್ಯಾಪಾರ ಮಾಡುವ ಸೋಗಿನಲ್ಲಿ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿರುವ ರೇಷ್ಮೆ ಸೀರೆ ಮಳಿಗೆಗೆ ಬಂದು ಸಿಬ್ಬಂದಿಯ ಗಮನ ಬೇರೆಡೆಗೆ ಸೆಳೆದು ಬೆಲೆ ಬಾಳುವ ರೇಷ್ಮೆ ಸೀರೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಅಶೋಕಪುರಂನಲ್ಲಿರುವ ಸಿಲ್ಕ್ ಫ್ಯಾಕ್ಟರಿ ಸೀರೆ ಮಳಿಗೆಗೆ ಸೀರೆ ಖರೀದಿಗೆಂದು ಜೂ.7ರಂದು ಬಂದ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ವ್ಯಾಪಾರದ ಸೋಗಿನಲ್ಲಿ ತರಹೇವಾರಿ ಸೀರೆಗಳನ್ನು ವೀಕ್ಷಿಸಿದ್ದು, ನಂತರ ತಮಗಿಷ್ಟವಾದ ಎರಡು ರೇಷ್ಮೆ ಸೀರೆಗಳನ್ನು ಸಿಬ್ಬಂದಿಯ ಗಮನ ಬೇರೆಡೆಗೆ ಸೆಳೆದು ಅಪಹರಿಸಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೂ.10ರಮದು ಮಳಿಗೆಯಲ್ಲಿ ವ್ಯಾಪಾರದ ಅವಧಿ ಮುಗಿದ ನಂತರ ಎಂದಿನಂತೆ ಸೀರೆಗಳನ್ನು ಲೆಕ್ಕ ಹಾಕಿದಾಗ 49ಸಾವಿರ ರೂ.ಬೆಲೆಬಾಳುವ ಎರಡು ಸೀರೆಗಳು ಕಡಿಮೆ ಬಂದಿದ್ದು,ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬುರ್ಖಾಧಾರಿ ಮಹಿಳೆಯರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯವನ್ನಾಧರಿಸಿ ಅಲ್ಲಿನ ಸಿಬ್ಬಂದಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: