ಮೈಸೂರು

ಬಾಡಿಗೆ ವಿಚಾರಕ್ಕೆ ತಗಾದೆ : ವಸ್ತುಗಳನ್ನು ಹೊರಗೆಸೆದ ಕಟ್ಟಡ ಮಾಲೀಕ

ಮೈಸೂರು,ಜೂ.12:- ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಕಟ್ಟಡದ ಮಾಲೀಕನೋರ್ವ ಅಂಗಡಿಗೆ ನುಗ್ಗಿ ನಿಗದಿತ ಬಾಡಿಗೆ ನೀಡುತ್ತಿಲ್ಲವೆಂದು ಆರೋಪಿಸಿ ಮಳಿಗೆಯಲ್ಲಿದ್ದ ವಸ್ತುಗಳನ್ನೆಲ್ಲ ಹೊರಗೆಸೆದು ಬೀಗ ಹಾಕಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೋದಂಡರಾಮು ಎಂಬ ಹೆಸರಿನ ಮಾಲೀಕ ರಾಜೇಶ್ ಮತ್ತು ದಯಾಶಂಕರ್ ಎಂಬವರಿಗೆ ಮಳಿಗೆಯನ್ನು ಬಾಡಿಗೆಗೆ ನೀಡಿದ್ದರು. ಸುಮಂಗಲಿ ಸಿಲ್ಕ್ ಹೆಸರಿನಡಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಇವರು ತಿಂಗಳಿಗೆ 28ಸಾವಿರ ರೂ. ಬಾಡಿಗೆ ನೀಡುತ್ತಿದ್ದರು. ಬಾಡಿಗೆ ಹೆಚ್ಚಿಸುವ ಕುರಿತು ಮಳಿಗೆಯ ಮಾಲಿಕ ಮತ್ತು ಇವರಿಬ್ಬರ ನಡುವೆ ಮಾತುಕತೆ ನಡೆದಿದ್ದು, 30,000ಬಾಡಿಗೆಗೆ ಒಪ್ಪಿದ್ದರು ಎನ್ನಲಾಗಿದೆ. ಕಟ್ಟಡದ ಮಾಲೀಕ ಇದನ್ನು ಒಪ್ಪದೇ ದುಪ್ಪಟ್ಟು ಬಾಡಿಗೆ ನೀಡಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಮಳಿಗೆದಾರರು ಅವರು ಹೇಳಿದಷ್ಟು ನೀಡದ ಕಾರಣ ನಿನ್ನೆ ಸಂಜೆ ಮಳಿಗೆಗೆ ನುಗ್ಗಿ ಸೀರೆಗಳನ್ನು ಹೊರಗೆಸೆದು ಮಳಿಗೆಗೆ ಬೀಗ ಹಾಕಿದ್ದು, ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆಯ ಪೊಲೀಸರು ಗುಂಪನ್ನು ಚದುರಿಸಿ ಕಟ್ಟಡ ಮಾಲೀಕ ಮತ್ತು ಮಳಿಗೆದಾರರ ವಿಚಾರಣೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: