
ಮೈಸೂರು
ಅಪ್ರಾಪ್ತೆ ಸೋದರ ಸೊಸೆಯ ಮೇಲೆ ಮಾವನಿಂದಲೇ ಅತ್ಯಾಚಾರ
ಮೈಸೂರು,ಜೂ.12:- ಸೋದರಮಾವನೇ ತನ್ನ ಅಕ್ಕನ ಅಪ್ರಾಪ್ತ ಮಗಳ ಮೇಲೆ ಶಾಲೆಗೆ ಬಿಡುವ ನೆಪದಲ್ಲಿ ಅತ್ಯಾಚಾರ ನಡೆಸಿದ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.
ಸರಸ್ವತಿಪುರಂ ನಿವಾಸಿ ರಮೇಶ್ ಎಂಬಾತ ತನ್ನ ಅಕ್ಕನ ಮಗಳನ್ನು ಗೋಪಾಲ ಸಂಸ್ಥೆಗೆ ಸೇರಿದ ಶಾಲೆಗೆ ಬಿಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆಂದು ಅಪ್ರಾಪ್ತೆಯ ಪೋಷಕರು ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ಯಾಚಾರವೆಸಗಿದ ಧೂರ್ತ ಇದೀಗ ತಲೆಮರೆಸಿಕೊಂಡಿದ್ದಾನೆ. ಲಕ್ಷ್ಮಿಪುರಣ ಠಾಣೆಯ ಇನ್ಸಪೆಕ್ಟರ್ ಮಾದೇವ್ ಶೆಟ್ಟಿ ತಂಡ ರಚಿಸಿ ಕಾಮುಕನ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತಿದೆ. (ಕೆ.ಎಸ್,ಎಸ್.ಎಚ್)