ಸುದ್ದಿ ಸಂಕ್ಷಿಪ್ತ
ಕತ್ತು ಹಿಸುಕಿ ಕೊಲೆ
ಪರಸ್ಪರ ಪ್ರೀತಿಸಿ ವಿವಾಹವಾದ ಯುವತಿಯನ್ನು ಪತಿಯೇ ಕತ್ತು ಹಿಸುಕಿ ಕೊಲೆಗೈದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಮೃತಳನ್ನು ಮಮತಾ(19) ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆ ಹೆಚ್.ಡಿ.ಕೋಟೆ ತಾಲೂಕಿನ ರಾಜೇನಗೌಡನ ಹುಂಡಿಯ ಪ್ರದೀಪ್(26) ಎಂಬಾತ ಮಮತಾಳನ್ನು ವಿವಾಹವಾಗಿದ್ದ. ಅವರಿಬ್ಬರೂ ಪರಸ್ಪರ ಪ್ರೀತಿಸಿಯೇ ವಿವಾಹವಾಗಿದ್ದರು. ಆದರೆ ಪತ್ನಿಯ ಮೇಲೆ ಅನುಮಾನಿಸುತ್ತಿದ್ದ ಪ್ರದೀಪ್ ಶುಕ್ರವಾರ ರಾತ್ರಿ ಕತ್ತು ಹಿಸುಕಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಎಚ್.ಡಿ.ಕೋಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರದೀಪ್ ಹಾಗೂ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ.