
ಕರ್ನಾಟಕಪ್ರಮುಖ ಸುದ್ದಿ
ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಗೆ ಮತ್ತೆ 12 ರಾಜ್ಯಗಳ ಸೇರ್ಪಡೆ
ನವದೆಹಲಿ (ಜೂನ್ 12): ಕೇಂದ್ರ ಸರ್ಕಾರದ ಅಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯಡಿ ಈಗಾಗಲೇ ಆಯ್ಕೆಯಾಗಿರುವ 8 ರಾಜ್ಯಗಳ ಜೊತೆಗೆ 12 ರಾಜ್ಯಗಳನ್ನು ಈ ಯೋಜನೆ ವ್ಯಾಪ್ತಿಗೊಳಪಡಿಸಲು ಸರ್ಕಾರ ನಿರ್ಧರಿಸಿದೆ.
ಈ ಯೋಜನೆ ಸಂಬಂಧ ಜೂನ್ 14 ರಂದು 12 ರಾಜ್ಯಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡಲಾಗುವುದು. ಆಸ್ಪತ್ರೆಗಳ ಅರ್ಹತೆಗೆ ಅನುಸಾರವಾಗಿ ಗುಣಮಟ್ಟದ ಆಪರೇಟಿಂಗ್ ಕಾರ್ಯ ವಿಧಾನಗಳನ್ನು ಪರಿಚಯ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.
ಜೊತೆಗೆ 2022 ರೊಳಗೆ 1.5 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ. ಈ ವರ್ಷ 14,000 ಕೇಂದ್ರಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. (ಎನ್.ಬಿ)