ಮೈಸೂರು

ಶ್ರೀಕಂಠದತ್ತ ಒಡೆಯರ್ ಪುಣ್ಯ ತಿಥಿ ಆಚರಣೆ

ಮೈಸೂರಿನ ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 3ನೇ ಪುಣ್ಯತಿಥಿಯನ್ನು ಶನಿವಾರ ಆಚರಿಸಲಾಯಿತು.

ಡಿಸೆಂಬರ್ 10, 2013ರಂದು ಇಹಲೋಕ ತ್ಯಜಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮೂರನೇ ಪುಣ್ಯತಿಥಿಯನ್ನು ಡಿಸೆಂಬರ್ 10ರಂದು ಆಚರಿಸಲಾಗುತ್ತಿದ್ದು, ಮಧುವನದಲ್ಲಿ ಅವರ ಸ್ಮಾರಕಕ್ಕೆ ಪೂಜೆ-ಪುನಸ್ಕಾರಗಳನ್ನು ರಾಜಮನೆತನದ ಪುರೋಹಿತರು ನೆರವೇರಿಸಿದರು. ಅರಮನೆ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ವಿವಿಧ ಸಂಘ ಸಂಸ್ಥೆಗಳ ವತಿಯಿಂದಲೂ ಶ್ರೀಕಂಠದತ್ತ ಒಡೆಯರ್ ಅವರ ಪುಣ್ಯತಿಥಿಯನ್ನು ಆಚರಿಸಲಾಯಿತು.

Leave a Reply

comments

Related Articles

error: