ಕರ್ನಾಟಕ

ಅನುಮಾನಾಸ್ಪದವಾಗಿ ಗೃಹಿಣಿ ಸಾವು

ಹಾವೇರಿ,ಜೂ.12: ಅನುಮಾನಾಸ್ಪವಾಗಿ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಸಾವನಪ್ಪಿರುವ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದಲ್ಲಿ ನಡೆದಿದೆ.

ಸುವರ್ಣ ಹೊನ್ನತ್ತಿ(27) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. 9 ವರ್ಷಗಳ ಹಿಂದೆ ನೆಲೋಗಲ್ ಗ್ರಾಮದ ನಿವಾಸಿ ಆಶೋಕ್ ಹೊನ್ನತ್ತಿ ಎಂಬುವವರ ಜೊತೆ ಸುವರ್ಣ ಮದುವೆ ಯಾಗಿದ್ದರು. ಸದ್ಯ ಅನುಮಾನಸ್ಪದವಾಗಿ  ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.   ಅತ್ತೆ, ಮಾವ ಹಾಗೂ ಪತಿ ಆಶೋಕ್ ವರದಕ್ಷಿಣೆ ಕಿರುಕುಳವನ್ನು ನೀಡುತ್ತಿದ್ದರು. ಅಶೋಕ್ ಕುಟುಂಬಸ್ಥರು ನಮ್ಮ ಮಗಳನ್ನು ಹೊಡೆದು ಕೊಲೆ ಮಾಡಿದ್ದಾರೆ ಮೃತಳ ಪೋಷಕರ ಆಗ್ರಹಿಸುತ್ತಿದ್ದಾರೆ. ಸದ್ಯ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. (ಪಿ.ಎಸ್ )

Leave a Reply

comments

Related Articles

error: