ಕರ್ನಾಟಕ

ಫೇಸ್‍ಬುಕ್ ಬಳಕೆ ವಿಚಾರಕ್ಕೆ ಜಗಳ: ದಂಪತಿ ಆತ್ಮಹತ್ಯೆ

ಬೆಂಗಳೂರು,ಜೂ.12: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೀಯಾ ಎಂದು ಜಗಳವಾಡುತ್ತಿದ್ದ ದಂಪತಿಗಳಿಬ್ಬರು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.

ಸೌಮ್ಯ ಎಂಎಸ್ (23) ಮತ್ತು ಪತಿ ಅನುಪ್ ವಿ (32) ಆತ್ಮಹತ್ಯೆಗೆ ಶರಣಾದ ದಂಪತಿ. ಪತ್ನಿ ಹೆಚ್ಚು ಫೇಸ್‍ಬುಕ್ ಬಳಸುವುದನ್ನು ಕಂಡ ಅನೂಪ್ ಆಕೆಗೆ ಫೇಸ್‍ಬುಕ್ ಬಳಸದಂತೆ ಹೇಳಿದ್ದಾನೆ. ಭಾನುವಾರ ರಾತ್ರಿ ಇಬ್ಬರ ನಡುವೆ ಇದೇ ವಿಚಾರದಲ್ಲಿ ಮಾತುಕತೆ ನಡೆದಿದೆ.ಇದಾದ ಬಳಿಕ ಸೌಮ್ಯ ಮಲಗಿದ ಕೋಣೆಗೆ ಹೊರಗಿಂದ ಲಾಕ್ ಮಾಡಿದ ಅನೂಪ್ ತಾನು ಇನ್ನೊಂದು ಕೋಣೆಗೆ ಹೋಗಿ ಮಲಗಿದ್ದಾನೆ. ಹೊರಟು ಬರುವಂತೆ ಸೋದರ  ಕರೆಗೆ ಓಗೊಟ್ಟ ಆತ ಸೋಮವಾರಪೇಟೆಯಿಂದ ಮಧ್ಯಾಹ್ನದ ವೇಳೆ ಬೆಂಗಳೂರು ತಲುಪಿ ಸೌಮ್ಯಳ ಮನೆ ಬಾಗಿಲು ಬಡಿದಿದ್ದಾನೆ. ಆದರೆ ಬಾಗಿಲು ತೆರೆಯದ ಕಾರಣ ನೆರೆಯವರ ಸಹಕಾರ ಪಡೆದು ಬಾಗಿಲು ಒಡೆದು ನೋಡಲಾಗಿ ಮಗು ಹಾರ್ದಿಕ್ ಒಬ್ಬನೇ ಕೋಣೆಯಲ್ಲಿ ಅಳುತ್ತಿದ್ದದ್ದು ಕಂಡಿದೆ. ಅನೂಪ್ ಹಾಗೂ ಸೌಮ್ಯ ಬೇರೆ ಬೇರೆ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ಬಾಗಲಗುಂಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಪಿ.ಎಸ್ )

Leave a Reply

comments

Related Articles

error: