ಮನರಂಜನೆ

ಟಾಲಿವುಡ್ ಗೆ ಎಂಟ್ರಿ ಕೊಟ್ಟ ಪವರ್ ಸ್ಟಾರ್

ಬೆಂಗಳೂರು,ಜೂ.12-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ತೆಲುಗಿನಲ್ಲಿ ಸಿನಿಮಾ ಮಾಡುತ್ತಿಲ್ಲ ಬದಲಿಗೆ ಪಿಆರ್ ಕೆ ಆಡಿಯೋ ಮೂಲಕ ಟಾಲಿವುಡ್ ನಲ್ಲಿ ಬಿಜಿನೆಸ್ ಶುರು ಮಾಡಿದ್ದಾರೆ.

ಕನ್ನಡದ ‘ಎಂಎಂಸಿಹೆಚ್’ ಸಿನಿಮಾ ತೆಲುಗಿನಲ್ಲಿ ‘ರಿಯಲ್ ದಂಡುಪಾಳ್ಯ’ ಎಂಬ ಹೆಸರಿನಲ್ಲಿ ಡಬ್ ಆಗಿದೆ. ಈ ಚಿತ್ರದ ಹಾಡುಗಳು ಪುನೀತ್ ಒಡೆತನದ ಪಿಆರ್ ಕೆ ಆಡಿಯೋ ಮೂಲಕ ಹೊರ ಬಂದಿವೆ. ಈ ಚಿತ್ರದ ತೆಲುಗು ಡಬ್ ಹಾಡುಗಳು ಹಾಗೂ ಟ್ರೈಲರ್ ಪಿಆರ್ ಕೆ ಆಡಿಯೋದಲ್ಲಿಯೇ ರಿಲೀಸ್ ಆಗಲಿದೆ.

‘ಎಂಎಂಸಿಹೆಚ್’ ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರವಾಗಿದೆ. ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ, ಮೇಘನಾ ರಾಜ್​ ನಕ್ಷತ್ರ, ಸಂಯುಕ್ತ ಬೆಳವಾಡಿ ಮತ್ತು ಪ್ರಾರ್ಥನಾ ಪ್ರಕಾಶ್​ ಅಭಿನಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: