Uncategorized

ಸ್ಥಳೀಯ ಸಂಸ್ಥೆ ಚುನಾವಣೆ : ವಾರ್ಡ್‍ವಾರು ಮೀಸಲಾತಿ ಪ್ರಕಟ : ಆಕ್ಷೇಪಣೆಗೆ ಅವಕಾಶ

ಮಡಿಕೇರಿ ಜೂ 12 :- 2011 ರ ಜನಗಣತಿ ಅನ್ವಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 2018-19 ನೇ ಸಾಲಿನಲ್ಲಿ ಚುನಾವಣೆ ನಡೆಸಲು ಸರ್ಕಾರವು ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಿದೆ.

ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿಯನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಚೇರಿಗಳಲ್ಲಿ, ತಾಲ್ಲೂಕು ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ಕೊಡಗು ಜಿಲ್ಲೆಯ ವೆಬ್‍ಸೈಟ್ ನಲ್ಲಿ ಜೂನ್ 21 ರ ವರೆಗೆ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕೋರಿದ್ದಾರೆ.

ಸರ್ಕಾರವು ನಿಗದಿಪಡಿಸಿರು ವಾರ್ಡ್‍ವಾರು ಮೀಸಲಾತಿಯಿಂದ ಬಾಧಿತರಾಗುವ ವ್ಯಕ್ತಿಗಳು ತಮ್ಮ ಸಲಹೆ/ ಆಕ್ಷೇಪಣೆಗಳನ್ನು ಜೂನ್ 21 ರ ವರೆಗೆ ಜಿಲ್ಲಾಧಿಕಾರಿಯವರ ಕಚೇರಿ, ತಾಲ್ಲೂಕು ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿ ಹಾಗೂ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.

ಮಡಿಕೇರಿ ನಗರಸಭೆ: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 2- ಸಾಮಾನ್ಯ, ವಾರ್ಡ್ ಸಂಖ್ಯೆ 3- ಹಿಂದುಳದ ವರ್ಗ (ಬಿ) ಮಹಿಳೆ, ವಾರ್ಡ್ ಸಂಖ್ಯೆ 4- ಸಾಮಾನ್ಯ, ವಾರ್ಡ್ ಸಂಖ್ಯೆ 5- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 6- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 7- ಹಿಂದುಳಿದ ವರ್ಗ (ಬಿ), ವಾರ್ಡ್ 8- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 9 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 10- ಸಾಮಾನ್ಯ, ವಾರ್ಡ್ ಸಂಖ್ಯೆ 11- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 12- ಸಾಮಾನ್ಯ, ವಾರ್ಡ್ ಸಂಖ್ಯೆ 13- ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 14- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 15- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 16- ಸಾಮಾನ್ಯ, ವಾರ್ಡ್ ಸಂಖ್ಯೆ 17- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 18- ಸಾಮಾನ್ಯ, ವಾರ್ಡ್ ಸಂಖ್ಯೆ 19- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 20 ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 21- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 22- ಸಾಮಾನ್ಯ ಮಹಿಳೆ ಮತ್ತು ವಾರ್ಡ್ ಸಂಖ್ಯೆ 23 ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ ಎಂದು ನಗರಾಭಿವೃದ್ಧಿ ಇಲಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕರ್ನಾಟಕ ರಾಜ್ಯ ಪತ್ರದಲ್ಲಿ ತಿಳಿಸಿದ್ದಾರೆ.

ವಿರಾಜಪೇಟೆ ಪಟ್ಟಣ ಪಂಚಾಯತ್: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2- ಸಾಮಾನ್ಯ, ವಾರ್ಡ್ 3- ಸಾಮಾನ್ಯ, ವಾರ್ಡ್ ಸಂಖ್ಯೆ 4- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 5-ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 6 ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 7- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 8- ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 9- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 10- ಸಾಮಾನ್ಯ, ವಾರ್ಡ್ ಸಂಖ್ಯೆ 11- ಸಾಮಾನ್ಯ, ವಾರ್ಡ್ 12- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 13- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 14- ಸಾಮಾನ್ಯ, ವಾರ್ಡ್ ಸಂಖ್ಯೆ 15- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 16- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 17- ಸಾಮಾನ್ಯ ಮಹಿಳೆ ಮತ್ತು ವಾರ್ಡ್ ಸಂಖ್ಯೆ 18- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಸೋಮವಾರ ಪೇಟೆ ಪಟ್ಟಣ ಪಂಚಾಯತ್: ವಾರ್ಡ್ ಸಂಖ್ಯೆ 1-ಸಾಮಾನ್ಯ, ವಾರ್ಡ್ ಸಂಖ್ಯೆ 2- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 3- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 4-ಸಾಮಾನ್ಯ, ವಾರ್ಡ್ ಸಂಖ್ಯೆ 5- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 6- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 7-ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 8- ಸಾಮಾನ್ಯ, ವಾರ್ಡ್ ಸಂಖ್ಯೆ 9- ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 10- ಸಾಮಾನ್ಯ ಮಹಿಳೆ ಮತ್ತು ವಾರ್ಡ್ ಸಂಖ್ಯೆ 11- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಕುಶಾಲನಗರ ಪಟ್ಟಣ ಪಂಚಾಯತ್: ವಾರ್ಡ್ ಸಂಖ್ಯೆ 1- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 2- ಸಾಮಾನ್ಯ, ವಾರ್ಡ್ ಸಂಖ್ಯೆ 3- ಸಾಮಾನ್ಯ, ವಾರ್ಡ್ ಸಂಖ್ಯೆ 4- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 5- ಹಿಂದುಳಿದ ವರ್ಗ(ಎ), ವಾರ್ಡ್ ಸಂಖ್ಯೆ 6- ಹಿಂದುಳಿದ ಹಿಂದುಳಿದ ವರ್ಗ(ಬಿ), ವಾರ್ಡ್ 7- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ಸಂಖ್ಯೆ 8- ಸಾಮಾನ್ಯ, ವಾರ್ಡ್ ಸಂಖ್ಯೆ 9- ಸಾಮಾನ್ಯ, ವಾರ್ಡ್ ಸಂಖ್ಯೆ 10- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 11- ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 12- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 13-ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 14- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 15- ಪರಿಶಿಷ್ಟ ಜಾತಿ ಮಹಿಳೆ ಮತ್ತು ವಾರ್ಡ್ 16-ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮತದಾರರ ಪಟ್ಟಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಅವರು ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ನೀಡಿದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: