ಕರ್ನಾಟಕಮೈಸೂರು

ಮೈಸೂರು ಕೋರ್ಟ್‍ನಲ್ಲಿ ನೂತನ ಕ್ಯಾಂಟೀನ್ ಉದ್ಘಾಟನೆ

ಮೈಸೂರು ಬಾರ್ ವತಿಯಿಂದ ಬುಧವಾರ ಮೈಸೂರು ಕೋರ್ಟ್ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾದ ಕ್ಯಾಂಟೀನ್ ಅನ್ನು ಉದ್ಘಾಟಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕೆ.ಎಸ್. ಮುದ್ಗಲ್ ಅವರು ಕ್ಯಾಂಟೀನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋರ್ಟಿಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು, ದಾವೆದಾರರು, ಸಾರ್ವಜನಿಕರು ಬರುತ್ತಿರುತ್ತಾರೆ. ಅವರಿಗೆಲ್ಲ ಸೌಕರ್ಯ ಒದಗಿಸಲು ಸರ್ಕಾರ ಮತ್ತು ಪಬ್ಲಿಕ್ ವೆಲ್ ಫೇರ್ ಡಿಪಾರ್ಟ್‍ಮೆಂಟ್ ವತಿಯಿಂದ ನೂತನ ಕ್ಯಾಂಟೀನ್ ರಚಿಸಲಾಗಿದೆ ಆಹಾರದ ಅವಶ್ಯಕತೆಯಿರುವವರು ಬಳಸಿಕೊಳ್ಳಬುದು ಎಂದು ತಿಳಿಸಿದರು.

ಆಹಾರ ಮನುಷ್ಯನ ಜೀವನಕ್ಕೆ ಅತಿ ಆವಶ್ಯಕ. ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರು ಗುಣಮಟ್ಟದ ಆಹಾರವನ್ನು ತಯಾರಿಸುತ್ತಾರೋ, ಅಂಥಹವರಿಗೆ ಟೆಂಡರ್ ನೀಡಲಾಗುತ್ತದೆ ಎಂದರು.

ಹಿರಿಯ ವಕೀಲ, ಮೈಸೂರು ಬಾರ್ ಅಸೋಸಿಯೇಶನ್ ಸದಸ್ಯ, ಇತ್ತೀಚೆಗೆ ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿ ನೇಮಕಗೊಂಡ ಸಿ.ಎಂ. ಜಗದೀಶ್ ಉಪಸ್ಥಿತರಿದ್ದರು. ಕೋರ್ಟ್ ಸಂಕೀರ್ಣದಲ್ಲಿ ಕ್ಯಾಂಟೀನ್ ತುಂಬಾ ಅಗತ್ಯ ಎಂದರು.

ಪಬ್ಲಿಕ್ ವೆಲ್ಫೇರ್ ಡಿಪಾರ್ಟ್‍ಮೆಂಟ್‍ನ ಸುಪರಿಂಟೆಂಡೆಂಟ್ ಇಂಜಿನಿಯರ್ ಸಿ. ಸತ್ಯನಾರಾಯಣ್, ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯ ಸಿ. ಅಪ್ಪಾಜಿಗೌಡ, ಮೈಸೂರು ಬಾರ್ ಅಸೋಸಿಯೇಶನ್‍ನ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: