ಮೈಸೂರು

ಚಲಿಸುತ್ತಿದ್ದ ಜೀಪ್ ಮೇಲೆ ಉರುಳಿ ಬಿದ್ದ ಮರ : ಚಾಲಕನ ಸ್ಥಿತಿ ಗಂಭೀರ

ಮೈಸೂರು,ಜೂ.12:- ಚಲಿಸುತ್ತಿದ್ದ ಜೀಪ್ ಮೇಲೆ ಮರ ಉರುಳಿ ಜೀಪ್ ನಲ್ಲಿದ್ದ ಚಾಲಕ ಗಂಭೀರ ಗಾಯಗೊಂಡ ಘಟನೆ ಹೆಚ್.ಡಿ.ಕೋಟೆ ಯಲ್ಲಿ ನಡೆದಿದೆ.

ಕೇರಳ ಮೂಲದ ನಿಸಾರ್ ಗಂಭೀರ ಗಾಯಗೊಂಡವನಾಗಿದ್ದು,  ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.  ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮಾರ್ಗವಾಗಿ ಬಳ್ಳೆ ಬಳಿ ಕೇರಳಕ್ಕೆ ಹೋಗುತ್ತಿದ್ದಾಗ ಏಕಾಏಕಿ ಜೀಪ್ ಮೇಲೆ ಮರ ಬಿದ್ದು, ಈ ಅನಾಹುತ ಸಂಭವಿಸಿದೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಸಾವು ಬದುಕಿನೊಡನೆ ಸೆಣಸಾಟ ನಡೆಸುತ್ತಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: