ಕರ್ನಾಟಕ

ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆಂದ ಯುವಕ ನಾಪತ್ತೆ : ಕಂಗಾಲಲ್ಲಿ ಕುಟುಂಬ

ರಾಜ್ಯ(ಚಾಮರಾಜನಗರ)ಜೂ.13:- ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆಂದ ಯುವಕ ನಾಪತ್ತೆಯಾದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ತೊರವಳ್ಳಿ ಗ್ರಾಮದ ಯುವಕ ಸಿದ್ದರಾಜು (28) ಕಾಣೆಯಾದ ಯುವಕನಾಗಿದ್ದು, ಕಳೆದ ಹತ್ತು ದಿನಗಳಿಂದ ಸಿದ್ದರಾಜು ಬರುವಿಕೆಗಾಗಿ ಆತನ ಕುಟುಂಬ ಪರಿತಪಿಸುತ್ತಿದೆ. ಅನ್ನ, ನೀರು, ಕಾಣದೇ ಹೆತ್ತ ತಾಯಿಯ ಕರುಳು ಜೀವ ಹಿಂಡುವಷ್ಟು ಸಂಕಟಪಡುತ್ತಿದ್ದಾರೆ. ಒಂದು ಕಡೆ ಹೆಂಡತಿಗೆ ಹಸುಗೂಸಿನ ವ್ಯಥೆ,ಮತ್ತೊಂದು ಕಡೆ ಹೆತ್ತ ತಾಯಿಗೆ ಮಗನ ಜಪ. ಹೊಳೆ ನರಸೀಪುರದಲ್ಲಿ ಇರುವ ಚಿಕ್ಕಪ್ಪನ ಹತ್ತಿರ ದುಡ್ಡು ತೆಗೆದುಕೊಂಡು ಬರುತ್ತೇನೆ ಎಂದು ಹೋಗಿದ್ದ ಸಿದ್ದರಾಜು ಅನುಮಾನಾಸ್ಪದ ರೀತಿಯಲ್ಲಿ ಕಾಣೆಯಾಗಿದ್ದು, ಕುಟುಂಬಸ್ಥರಿಗೆ ದಿಗ್ಬ್ರಮೆ ಉಂಟಾಗಿದೆ. ಈ ಸಂಬಂಧ ಹೊಳೆ ನರಸೀಪುರ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ ಕುಟುಂಬಸ್ಥರು. ಹೀಗಾಗಿ ಆತ ಯಾರ ಕಣ್ಣಿಗಾದರೂ ಕಣ್ಣಿಗೆ ಬಿದ್ದಲ್ಲಿ ಮಾಹಿತಿ ನೀಡಿ ಎಂದು ಬಡ ಕುಟುಂಬ ಗೋಳಾಡುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: