ಮೈಸೂರು

ಕಪಿಲಾ ನದಿ ತೀರದಲ್ಲಿ ಸ್ವಚ್ಛತಾ ಕಾರ್ಯ

ಮೈಸೂರು,ಜೂ.13:- ಪರಿಸರ ನಿರ್ವಹಣೆ ಮತ್ತು ಜೀವಶಾಸ್ತ್ರ ಸಂಶೋಧನಾ ಸಂಸ್ಥೆಯ ವತಿಯಿಂದ ನಂಜನಗೂಡು ಕಪಿಲಾ ನದಿ ತೀರದಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ಹಿಮ್ಮೆಟ್ಟಿಸಿ ಘೋಷವಾಕ್ಯದೊಂದಿಗೆ ಮಿನಿ ಮ್ಯಾರಾಥಾನ್, ಬೀದಿ ನಾಟಕ, ಮತ್ತು ನದಿಯಲ್ಲಿ ಬಿದ್ದಿರುವ ತ್ಯಾಜ್ಯಗಳನ್ನೆತ್ತಿ ಶುಚಿಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕಪಿಲಾ ನದಿಯ ತೀರದಲ್ಲಿ ಬಿದ್ದ ತುಂಡು ಬಟ್ಟೆ, ಪ್ಲಾಸ್ಟಿಕ್‍ಯುಕ್ತ ಪದಾರ್ಥಗಳನ್ನು ನೂರಾರು ಮಕ್ಕಳು, ಸ್ವಯಂಸೇವಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನಂಜನಗೂಡು ಗ್ರಾಮಾಂತರಶಾಲಾ ಮಕ್ಕಳು ಸ್ವಚ್ಛಗೊಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಲೋಕೇಶ್ ಮೂರ್ತಿ, ಪರಿಸರ ಮಾಲಿನ್ಯದ ಅಧಿಕಾರಿ ಯತೀಶ್, ನಿರ್ದೇಶಕರಾದ ವಿನಯಕುಮಾರ್, ಸಿ.ರಮೇಶ್, ತರಬೇತುದಾರರಾದ ಬಸವರಾಜು ಮತ್ತು ಸ್ಥಳೀಯ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: