ಮೈಸೂರು

ಡಿ.23: ರಾಷ್ಟ್ರೀಯ ರೈತ ದಿನಾಚರಣೆ

ಭಾರತೀಯ ಕೃಷಿಕ ಸಮಾಜ ಮತ್ತು ರೈತ ಸಂಘಟನೆ ಕರ್ನಾಟಕ ರಾಜ್ಯ ಇವರ ಸಹಯೋಗದಲ್ಲಿ ಮಾಜಿ ಪ್ರಧಾನ ಮಂತ್ರಿ ಡಾ. ಚರಣ್ ಸಿಂಗ್ ಚೌಧರಿ ಅವರ 114 ನೇ ಜಯಂತಿ ಪ್ರಯುಕ್ತ ಡಿ.23 ರಂದು ಬೆಳಿಗ್ಗೆ 10.30 ಕ್ಕೆ  ರಂಗಾಚಾರ್ಲು ಪುರಭವನದಲ್ಲಿ ‘ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ರೈತರ ಸಮಾವೇಶ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಿದಗೌಡ ಮೋದಗಿ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಠದ ಸೋಮನಾಥ ಸ್ವಾಮೀಜಿ ವಹಿಸಲಿದ್ದಾರೆ. ಮಹಾಪೌರ ಎಂ.ಜೆ. ರವಿಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೈಸೂರು ವಿ.ವಿ.ಯ ಸಿಸ್ಟ್ ನಿರ್ದೇಶಕ ಡಾ. ಎ.ಎಂ. ಸುಧಾಕರ್ ಅವರು ಸಾಮಾಜಿಕ ಜಾಲತಾಣವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಸಂಸದ ಪ್ರತಾಪ್ ಸಿಂಹ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಕೆ. ಸೋಮಶೇಖರ್, ಜಿ.ಟಿ. ದೇವೇಗೌಡ, ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣವರ್ ಮತ್ತಿತರರು ಉಪಸ್ಥಿತರಿರುತ್ತಾರೆ. ನಂತರ ಪ್ರಗತಿಪರ ರೈತರಿಗೆ ಸನ್ಮಾನ ಮಾಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ವಿ. ಕೃಷ್ಣಮೂರ್ತಿ, ಸಿದ್ದರಾಮಯ್ಯ, ಸಿ. ಕುಮಾರಸ್ವಾಮಿ, ಚಂದ್ರಶೇಖರ್ ಪಟೇಲ್ ಹಾಜರಿದ್ದರು.

Leave a Reply

comments

Related Articles

error: