ಮೈಸೂರು

ಡಿ.17-18: ಕರಾಟೆ ಪಂದ್ಯಾವಳಿ

ಓಕಿನಾವಾ ಕರಾಟೆ ಆರ್ಟ್ಸ್ ಅಸೋಸಿಯೇಷನ್ ಡಿ.17 ಮತ್ತು 18 ರಂದು ಶ್ರೀ ಬಂದತಮ್ಮ ಕಾಳಮ್ಮ ಸಮುದಾಯ ಭವನದಲ್ಲಿ ಕರಾಟೆ ಪಂದ್ಯಾವಳಿಯನ್ನು ಆಯೋಜಿಸಿದೆ ಎಂದು ಸಂಘದ ಪದಾಧಿಕಾರಿ ವಿನಯ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿನಯ್ ಮಾತಾಡಿ ಡಿ.17 ರ ಬೆಳಿಗ್ಗೆ 10.30 ಕ್ಕೆ ಎ.ಕೆ.ಎಸ್.ಕೆ.ಎ ಕಾರ್ಯದರ್ಶಿ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಆದಿಚುಂಚಗಿರಿ ಮಠದ ಸೋಮೇಶ್ವರ ಸ್ವಾಮೀಜಿ ದಿವ್ಯ ಸಾನಿಧ‍್ಯ ವಹಿಸಲಿದ್ದಾರೆ ಎಂದರು. ಮೈಸೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ಮೈಸೂರು ಪಶ್ಚಿಮ ರೋಟರಿ ಕ್ಲಬ್ ನ ಸಿ.ಆರ್. ಹನುಮಂತ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7795584180 / 9742811147 ಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಹೇಶ್, ವಿದ್ಯಾಸಾಗರ್, ಪರೀಕ್ಷಿತ್, ಎನ್.ಬಿ. ಆರಾಧ‍್ಯ, ಶಮಂತಾ ಹಾಜರಿದ್ದರು.

Leave a Reply

comments

Related Articles

error: