ಮೈಸೂರು

ಡಿ.11: ಸನ್ನದು ಸ್ವೀಕಾರ

ರೋಟರಿ ಹೆರಿಟೇಜ್ ಮೈಸೂರು ಡಿ.11 ರಂದು ಸಂಜೆ 5.30 ಸರಸ್ವತಿಪುರಂನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಸನ್ನದು ಸ್ವೀಕಾರ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ರೋಟರಿ ಮೈಸೂರು ಉತ್ತರ ಮಾಜಿ ಅಧ‍್ಯಕ್ಷ ಎಂ.ಮಲ್ಲರಾಜೇ ಅರಸ್ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಹೆರಿಟೇಜ್ ನ ಅಧ‍್ಯಕ್ಷರಾದ ಮಂಜುನಾಥ್. ಕೆ  ಅವರಿಗೆ ರೋಟರಿ ಜಿಲ್ಲಾ ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ ಸನ್ನದು ಪ್ರದಾನ ಮಾಡಲಿದ್ದಾರೆ. ಗೌರವ ಸದಸ್ಯರಾಗಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣವರ್ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಮಂಜುನಾಥ್, ಅಶೋಕ್ ಬಿ.ಆರ್. ಹರೀಶ್ ಮತ್ತು ಸುರೇಶ್ ಹಾಜರಿದ್ದರು.

Leave a Reply

comments

Related Articles

error: