
ಮೈಸೂರು
ದಾಖಲೆ ಇಲ್ಲದ ಲಕ್ಷಾಂತರ ರೂ. ವಶ: ಇಬ್ಬರ ಬಂಧನ
ಯಾವುದೇ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 22,26,000 ರೂ. ಗಳನ್ನು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೆಸರೆ ಕೆ.ಆರ್. ಮಿಲ್ ಕಾಲೋನಿಯ ಗುರುಲಿಂಗ (42), ಹುಣಸೂರು ತಾಲೂಕಿನ ಹಳೆಬೀಡು ಗ್ರಾಮದ ಶ್ರೀನಿವಾಸ (38) ಎಂದು ಗುರುತಿಸಲಾಗಿದೆ.
ಬಂಧಿತರು ಸ್ವಿಫ್ಟ್ ಕಾರಿನಲ್ಲಿ 2000 ಮುಖಬೆಲೆಯ ಒಟ್ಟು 22,26,000 ರೂ.ಗಳನ್ನು ಕೊಂಡೊಯ್ಯುತ್ತಿದ್ದರು. ದಾಖಲೆ ಕೇಳಲಾಗಿ ಸಮರ್ಪಕ ಉತ್ತರ ನೀಡದೇ ಇರುವುದರಿಂದ ಆರೋಪಿಗಳನ್ನು ದಸ್ತಗಿರಿ ಮಾಡಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜಿ.ಎಸ್. ರಘು, ಸಿಬ್ಬಂದಿಗಳಾದ ಶಾಂತಕುಮಾರ್, ಬೀರಪ್ಪ, ನಟರಾಜು ಪಾಲ್ಗೊಂಡಿದ್ದರು.