
ಮೈಸೂರು
ತಲಕಾಡು ಗ್ರಾ.ಪಂ. ಸದಸ್ಯ ತಿಪ್ಪೇಕಾಳಿರಂಗನಾಥ ಗೆ ಗೌರವ ಡಾಕ್ಟರೇಟ್
ಮೈಸೂರು,ಜೂ.13 : ಜಿಲ್ಲೆಯ ತಲಕಾಡು ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಕಾಳಿರಂಗನಾಥ ಅವರಿಗೆ ಬೆಂಗಳೂರಿನ ಇಂಡಿಯನ್ ವರ್ಚ್ಯುಯಲ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.
ಇವರ ಸಮಾಜ ಸೇವೆಯನ್ನು ಪರಿಗಣಿಸಿ ಡಾಕ್ಟರೇಟ್ ಅನ್ನು ಧಾರವಾಡದ ಸೃಜನ ಡಾ.ಅಣ್ಣಾರಾವ್ ಶಿರೂರ್ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.
ರಾಜ್ಯ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಆರ್.ಕೃಷ್ಣೇಗೌಡ, ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷ ಹೆಚ್.ಎಲ್.ಯಮುನಾ, ತಲಕಾಡಿನ ಹಸ್ತಿಕೇರಿ ಮಠಾಧೀಶ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಗ್ರಾ.ಪಂ ಅಧ್ಯಕ್ಷೆ ಕವಿತ ವಿಜಯ ಕುಮಾರ್ ನಾಯಕ್, ಜಿ.ಪಂ ಸದಸ್ಯ ಮಂಜುನಾಥನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಟಿ.ಎನ್.ದಾಸೇಗೌಡ ಇವರುಗಳು ತಿಪ್ಪೇಕಾಳಿರಂಗನಾಥ್ ಅವರನ್ನು ಅಭಿನಂದಿಸಿದ್ದಾರೆ. (ಕೆ.ಎಂ.ಆರ್)